ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ಹಳಿ ತಪ್ಪಿದ ಕಣ್ಣೂರು–ಆಳಪ್ಪುಳ ಎಕ್ಸ್‌ಪ್ರೆಸ್‌ನ ರೈಲಿನ ಎರಡು ಬೋಗಿಗಳು

Published 20 ಜನವರಿ 2024, 6:42 IST
Last Updated 20 ಜನವರಿ 2024, 6:42 IST
ಅಕ್ಷರ ಗಾತ್ರ

ಕಣ್ಣೂರು: ಕಣ್ಣೂರು ರೈಲು ನಿಲ್ದಾಣದ ಬಳಿ ಕಣ್ಣೂರು–ಆಳಪ್ಪುಳ ಎಕ್ಸಿಕ್ಸೂಟಿವ್‌ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ ರೈಲು ಹೊರಡುವಲ್ಲಿ ಒಂದು ಗಂಟೆ ವಿಳಂಬವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಇಂದು (ಶನಿವಾರ) ಬೆಳಗಿನ ಜಾವ ಸುಮಾರು 4.40ರ ಹೊತ್ತಿಗೆ ರೈಲನ್ನು ಪ್ಲಾಟ್‌ಫಾರ್ಮ್‌ಗೆ ತರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.

ರೈಲಿನ ಹಿಂದಿನ ಎರಡು ಬೋಗಿಗಳು ಹಳಿ ತಪ್ಪಿದ್ದು, ಸಿಗ್ನಲ್‌ ಬಾಕ್ಸ್‌ಗೆ ಹಾನಿಯಾಗಿದೆ. ಮುಖ್ಯ ಟ್ರ್ಯಾಕ್‌ಗೆ ಸಮಾನಾಂತರವಾದ ಟ್ರ್ಯಾಕ್‌ನಲ್ಲಿ ಘಟನೆ ಸಂಭವಿಸಿದ್ದರಿಂದ, ಇತರೆ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಹಳಿ ತಪ್ಪಿದ ಬೋಗಿಗಳನ್ನು ಬೇರ್ಪಡಿಸಿದ ನಂತರ ರೈಲು ಪ್ರಯಾಣ ಮುಂದುವರೆಯಿತು. ರೈಲು ಹಳಿ ತಪ್ಪಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಅಧಿಕಾರಿಗಳು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT