ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿವೃತ್ತಿ ಬಗ್ಗೆ ಯೋಚಿಸಿಲ್ಲ, 2027ರ ವಿಶ್ವಕಪ್ ಆಡುವೆ: ರೋಹಿತ್ ಶರ್ಮಾ

Published 13 ಏಪ್ರಿಲ್ 2024, 15:51 IST
Last Updated 13 ಏಪ್ರಿಲ್ 2024, 15:51 IST
ಅಕ್ಷರ ಗಾತ್ರ

ನವದೆಹಲಿ: 2023ರ ಆವೃತ್ತಿಯ ವಿಶ್ವಕಪ್‌ ಗೆಲ್ಲಲು ಆಗಲಿಲ್ಲ. 2027ರ ಏಕದಿನ ವಿಶ್ವಕಪ್‌ ಗೆಲ್ಲಲು ಬಯಸುತ್ತಿರುವ ಕಾರಣ ಇನ್ನೂ ಕೆಲವು ವರ್ಷಗಳ ಕಾಲ ಮುಂದುವರಿಯಲು ಯೋಚಿಸಿದ್ದೇನೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 

36 ವರ್ಷದ ರೋಹಿತ್ ಅವರು 2007ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಕಳೆದ ವರ್ಷ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಂಡದ ಫೈನಲ್‌ನಲ್ಲಿ ಸೋತು ಕಪ್‌ ಸ್ವಲ್ಪದರಲ್ಲೇ ತಪ್ಪಿದ್ದರಿಂದ ಆಘಾತಕ್ಕೆ ಒಳಗಾಗಿದ್ದರು.

‘ನಾನು ನಿವೃತ್ತಿಯ ಬಗ್ಗೆ ಯೋಚಿಸಿಲ್ಲ. ಆದರೆ, ಬದುಕು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಗೊತ್ತಿಲ್ಲ. ನಾನು ಈಗ ಉತ್ತಮವಾಗಿ ಆಡುತ್ತಿದ್ದೇನೆ. ಇನ್ನೂ ಕೆಲವು ವರ್ಷ ಮುಂದುವರಿಯುವ ಬಗ್ಗೆ ಯೋಚಿಸುತ್ತಿದ್ದೇನೆ. ನಿಜವಾಗಿಯೂ ಆ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ’ ಎಂದು ಅವರು ಯೂಟ್ಯೂಬ್ ಚಾಟ್ ಶೋ ‘ಬ್ರೇಕ್ ಫಾಸ್ಟ್‌ ವಿತ್ ಚಾಂಪಿಯನ್ಸ್' ನಲ್ಲಿ ಹೇಳಿದರು. ಇದರಲ್ಲಿ ಬ್ರಿಟಿಷ್ ಪಾಪ್ ಗಾಯಕ ಎಡ್ ಶೀರನ್ ಕೂಡ ಭಾಗವಹಿಸಿದ್ದರು.

'50 ಓವರ್‌ಗಳ ವಿಶ್ವಕಪ್ ನಿಜವಾದ ವಿಶ್ವಕಪ್. ನಾವು 50 ಓವರ್‌ಗಳ ವಿಶ್ವಕಪ್ ನೋಡುತ್ತಾ ಬೆಳೆದಿದ್ದೇವೆ. 2025ರಲ್ಲಿ ಲಾರ್ಡ್ಸ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯ ನಡೆಯಲಿದೆ. ನಾವು ಅಲ್ಲಿ ಯಶಸ್ಸು ಪಡೆಯುವ ವಿಶ್ವಾಸವಿದೆ’ ಎಂದು ರೋಹಿತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT