ಬುಧವಾರ, ಜೂನ್ 23, 2021
29 °C

ಯುವಕರ ಸವಾಲಿಗೆ ಪ್ರಾಣತೆತ್ತ ವೃದ್ಧ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಗ್ರಾಮದ ಯುವಕರ ₹200 ರೂಪಾಯಿ ಸವಾಲನ್ನು ಸ್ವೀಕರಿಸಿ, ಕೊಳ ದಾಟಲು ಪ್ರಯತ್ನಿಸಿದ 60 ವರ್ಷದ ವೃದ್ಧ ಮಾರ್ಗ ಮಧ್ಯೆಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಡಾಯು ಜಿಲ್ಲೆಯಲ್ಲಿ ನಡೆದಿದೆ. 

ಕುಲ್ಬೀರ್ ಸಿಂಗ್ ಮೃತಪಟ್ಟವರು. ಯುವಕರ ಸವಾಲಿನಂತೆ ಕೊಳಕ್ಕೆ ಹಾರಿದ ಕುಲ್ಬೀರ್‌ ಸಿಂಗ್‌ ಈಜಲು ಪ್ರಾರಂಭಿಸಿದರು. ಭಾರಿ ಮಳೆಯಿಂದಾಗಿ ನೀರಿನ ಮಟ್ಟವೂ ಹೆಚ್ಚಿದ್ದರಿಂದ ಅವರಿಗೆ ಕೊಳ ದಾಟಲು ಸಾಧ್ಯವಾಗಿಲ್ಲ. ಕುಲ್ಬೀರ್‌ ಅವರು ಮುಳುಗುತ್ತಿದುದ್ದನ್ನು ಕಂಡ ಯುವಕರು ಕೊಳಕ್ಕೆ ಹಾರಿ ಅವರನ್ನು ದಡ ಸೇರಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಾಗಲೇ ಅವರು ಮೃಪಟ್ಟಿದ್ದರು.

ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು