ಗುರುವಾರ , ಮಾರ್ಚ್ 23, 2023
22 °C

ತಮಿಳುನಾಡು ಮೃಗಾಲಯದಲ್ಲಿ 10 ಆಸ್ಟ್ರಿಚ್ ಪಕ್ಷಿಗಳು ನಿಗೂಢ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ; 10 ಆಸ್ಟ್ರಿಚ್ (ಉಷ್ಟ್ರ ಪಕ್ಷಿ) ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ವಂದಲೂರು ಅರಿಗ್ನರ್ ಅಣ್ಣಾ ಜೂಲಾಜಿಕಲ್ ಪಾರ್ಕ್ ನಲ್ಲಿ ನಡೆದಿರುವುದು ವರದಿಯಾಗಿದೆ.

ಕಳೆದ ಅ. 27 ರಂದು ಐದು ಆಸ್ಟ್ರಿಚ್‌ಗಳು ಇದ್ದಕ್ಕಿದ್ದಂತೆ ಸಾವನ್ನಪಿದ್ದವು. ಬಳಿಕ ಇದೇ ರೀತಿ ಮತ್ತೈದು ಆಸ್ಟ್ರಿಚ್‌ಗಳು ಸಾವನ್ನಪ್ಪಿದ್ದಾವೆ. ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಪಾರ್ಕ್‌ನಲ್ಲಿ ಒಟ್ಟು 37 ಆಸ್ಟ್ರಿಚ್‌ಗಳಿದ್ದವು, ಈಗಾಗಲೇ ಇದರಲ್ಲಿ 10 ಮೃತಪಟ್ಟಿದ್ದು, ಉಳಿದವುಗಳನ್ನು ರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಪಕ್ಷಿಗಳ ರಕ್ತ ಮತ್ತು ಇತರ ಮಾದರಿಗಳನ್ನು ಭೂಪಾಲ್‌ನ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸಿಸಸ್‌ಗೆ ಕಳುಹಿಸಲಾಗಿದ್ದು ಅಲ್ಲಿನ ತಜ್ಞರು ಆಸ್ಟ್ರಿಚ್‌ಗಳಿಗೆ ಕೊರೊನಾ ಸೋಂಕು ಇರುವುದನ್ನು ತಳ್ಳಿ ಹಾಕಿದ್ದಾರೆ ಎಂದು ತಮಿಳುನಾಡು ವನ್ಯಜೀವಿ ಮುಖ್ಯ ಅಧಿಕಾರಿ ಡಾ ಶೇಖರ್ ಕುಮಾರ್ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.

ಆಸ್ಟ್ರಿಚ್‌ಗಳ ಸಾವಿನ ಕುರಿತು ತನಿಖೆ ನಡೆಸಲು ವನ್ಯಜೀವಿ ತಜ್ಞ ಸಿ ಸೌಂದರ್ಯ ರಾಜನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಅಲ್ಲದೇ ಪಾರ್ಕ್ ನಲ್ಲಿ ಉಳಿದ ಆಸ್ಟ್ರಿಚ್ ಪಕ್ಷಿಗಳನ್ನು ರಕ್ಷಿಸಲು ಕ್ರಮ ವಹಿಸಲಾಗಿದೆ. ಏನಾದರೂ ನಿಗೂಢ ಖಾಯಿಲೆ ಇದ್ದರೆ ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ಗೆ ಪಿಪಿಇ ಕಿಟ್ ನೀಡಲಾಗಿದೆ ಎಂದು ಪಾರ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಹೊರಟಿದೆ ನಾಸಾದ ‘ಲೂಸಿ‘

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು