ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿ: 7 ಹುಲಿ ಸೇರಿ 12 ವನ್ಯಮೃಗಗಳಿಗೆ ಕೋವಿಡ್ ಪಾಸಿಟಿವ್

Last Updated 12 ಜೂನ್ 2021, 14:54 IST
ಅಕ್ಷರ ಗಾತ್ರ

ರಾಂಚಿ: ಇಲ್ಲಿನ ಭಗವಾನ್ ಬಿರ್ಸಾ ಜೈವಿಕ ಉದ್ಯಾನದಲ್ಲಿ ಏಳು ರಾಯಲ್ ಬಂಗಾಳ ಹುಲಿಗಳು ಮತ್ತು ಇತರ ಪ್ರಾಣಿಗಳಿಗೆ ಕೋವಿಡ್ ಪಾಸಿಟಿವ್ ಆಗಿರುವುದಾಗಿ ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ದೀರ್ಘಕಾಲದ ಅನಾರೋಗ್ಯದ ನಂತರ ಜೂನ್ 3 ರಂದು ಮೃತಪಟ್ಟ ಹುಲಿ ಶಿವನ ಮಾದರಿಗಳು ನೆಗೆಟಿವ್ ಬಂದಿದೆ.

ದೇಶದ ವಿವಿಧೆಡೆಯಿಂದ ಉತ್ತರಪ್ರದೇಶದ ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದ್ದ ಹುಲಿ ಪಂಗಡಕ್ಕೆ ಸೇರಿದ ಪ್ರಾಣಿಗಳ ಪ್ರಯೋಗಾಲಯ ಮಾದರಿಗಳು ಪಾಸಿಟಿವ್ ಬಂದಿವೆ.

‘ರಾಯಲ್ ಬಂಗಾಳದ ಏಳು ಹುಲಿಗಳು ಸೇರಿದಂತೆ 12 ಪ್ರಾಣಿಗಳ ಕೋವಿಡ್-19 ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿದೆ’ಎಂದು ಮೃಗಾಲಯದ ನಿರ್ದೇಶಕ ವೈ ಕೆ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಜಾವಾ, ಮಲಿಕ್, ಗೌರಿ, ಲಕ್ಷ್ಮಿ, ಸರಸ್ವತಿ ಮತ್ತು ಕಾವೇರಿ, ಏಷ್ಯಾಟಿಕ್ ಸಿಂಹಗಳಾದ ವಿರು ಮತ್ತು ಜಯ, ಹೈಬ್ರಿಡ್ ಸಿಂಹ ಪ್ರಿಯಾಂಕಾ, ಬ್ಲಾಕ್ ಪ್ಯಾಂಥರ್ ಮಿರ್ಜಾ, ಚಿರತೆ ರಾಧಾ ಮಾದರಿಗಳು ಪಾಸಿಟಿವ್ ಬಂದಿವೆ.

ಮೃಗಾಲಯವನ್ನು ಮುಚ್ಚಿರುವಾಗ, ಪ್ರಾಣಿಗಳ ನಡುವೆ ಸೋಂಕು ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ, ಇದರಲ್ಲಿ ಮೃಗಾಲಯದ ಸಿಬ್ಬಂದಿಗೆ ಲಸಿಕೆ ಹಾಕುವುದು ಮತ್ತು ಅವರ ನಿಯಮಿತ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉದ್ಯಾನವನದ ಆವರಣ ಮತ್ತು ಇತರ ಭಾಗಗಳಲ್ಲಿ ನಿಯಮಿತವಾಗಿ ಸ್ಯಾನಿಟೈಸೇಶನ್ ಕಾರ್ಯ ಕೈಗೊಳ್ಳಲಾಗಿದೆ.

ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ರಾಂಚಿ ಮೃಗಾಲಯದಲ್ಲಿ ಅಲರ್ಟ್ ಘೋಷಿಸಲಾಗಿದೆ.

ಜೂನ್ 4 ರಂದು, ಚೆನ್ನೈ ಬಳಿಯ ವಂಡಲೂರಿನ ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹಿಣಿ ನೀಲಾ ಕೋವಿಡ್-19 ಗೆ ಬಲಿಯಾಗಿದ್ದು, ಇತರೆ ಒಂಬತ್ತು ಪ್ರಾಣಿಗಳಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT