ಶುಕ್ರವಾರ, ಮೇ 20, 2022
19 °C

ವಿದೇಶಿ ಮದ್ಯ ಎಂದು ಭಾವಿಸಿ ದ್ರವ ಪದಾರ್ಥ ಸೇವನೆ: ಮೂವರು ಮೀನುಗಾರರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪಟ್ಟಣಂ/ರಾಮೇಶ್ವರ: ಸಾಗರದಲ್ಲಿ ತೇಲಿಬಂದ ಬಾಟಲಿಯಲ್ಲಿದ್ದ ದ್ರವ ಪದಾರ್ಥವನ್ನು ವಿದೇಶಿ ಮದ್ಯ ಇರಬಹುದು ಎಂದು ಭಾವಿಸಿ ಕುಡಿದ ಪರಿಣಾಮ ಮೂವರು ಮೀನುಗಾರರು ಮೃತಪಟ್ಟಿದ್ದಾರೆ ಎಂದು ತಮಿಳುನಾಡು ಮೀನುಗಾರಿಕೆ ಇಲಾಖೆ ಭಾನುವಾರ ಹೇಳಿದೆ.

38 ವರ್ಷದ ವ್ಯಕ್ತಿ ದೋಣಿಯಲ್ಲಿಯೇ ಮೃತಪಟ್ಟರು. 40 ವರ್ಷದ ಮೀನುಗಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. 26 ವರ್ಷದ ಮೀನುಗಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಮೇಶ್ವರ ಬಳಿ ಈ ಘಟನೆ ನಡೆದಿದೆ. ಆರು ಜನ ಮೀನುಗಾರರು ಮಾರ್ಚ್ 1ರಂದು ರಾಮೇಶ್ವರ ಸಮೀಪದ ಕೋಡಿಯಾಕಾರೈನಿಂದ ಮೀನು ಹಿಡಿಯಲು ತೆರಳಿದ್ದರು ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು