ಅಮರನಾಥ ಯಾತ್ರೆ: 33,795 ಯಾತ್ರಿಕರು ನೋಂದಣಿ

ಜಮ್ಮು: ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ದೇಶದಾದ್ಯಂತ 33 ಸಾವಿರಕ್ಕೂ ಅಧಿಕ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ.
43 ದಿನಗಳ ಯಾತ್ರೆ ಜೂನ್ 30ರಿಂದ ಆರಂಭಗೊಳ್ಳಲಿದ್ದು, ಶನಿವಾರದ ವರೆಗೆ 33,795 ಜನರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 22,229 ಮಂದಿ ಆನ್‌ಲೈನ್ ಹಾಗೂ 11,566 ಜನರು ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಮರನಾಥ ದೇವಾಲಯ ಮಂಡಳಿಯ(ಎಸ್‌ಎಎಸ್‌ಬಿ) ಸಿಇಒ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಈ ಬಾರಿ ಎಸ್‌ಎಎಸ್‌ಬಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರನ್ನು ಹೊರತುಪಡಿಸಿ, ದಿನನಿತ್ಯದ ಯಾತ್ರಿಕರ ಸಂಖ್ಯೆಯನ್ನು 10 ಸಾವಿರಕ್ಕೆ ಮಿತಿಗೊಳಿಸಿದೆ. ಜತೆಗೆ 2.75 ಕೀ.ಮೀ.ಯ ಬಲ್ಟಾಲ್ ನಿಂದ ಡೊಮಿಲ್ ವರೆಗೆ ಉಚಿತವಾಗಿ ಬ್ಯಾಟರಿ ಕಾರಿನ ಸೇವೆ ಒದಗಿಸಲು ನಿರ್ಧರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.