ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್: ಹಿಂಸೆಗೆ ತಿರುಗಿದ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ನಾಲ್ವರು ಸಾವು

Last Updated 7 ಜನವರಿ 2021, 6:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ರಾಜಧಾನಿ ವಾಷಿಂಗ್ಟನ್‌ ಡಿ.ಸಿಗೆ ಮುತ್ತಿಗೆ ಹಾಕಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಹಿಂಸಾಚಾರದಲ್ಲಿ ಮಹಿಳೆಯೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ವಾಷಿಂಗ್ಟನ್ ಡಿ.ಸಿಯ ಪೊಲೀಸ್ ವರಿಷ್ಠಾಧಿಕಾರಿ ರಾಬರ್ಟ್ ಕಾಂಟೀ ಅವರು, ಹಿಂಸೆ ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದಾಗ ಮಹಿಳೆಯೊಬ್ಬರು ಸತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಇತರ ಮೂವರು ಮೃತಪಟ್ಟರು ಎಂದು ಮಾಹಿತಿ ನೀಡಿದ್ದಾರೆ.

ಟ್ರಂಪ್‌ ಬೆಂಬಲಿಗರು ಇಲ್ಲಿನ ಸಂಕೀರ್ಣಕ್ಕೆ ಒಂದು ಗಂಟೆಗೂ ಅಧಿಕ ಕಾಲ ಮುತ್ತಿಗೆ ಹಾಕಿದ್ದರು. ಗುಂಪು ಚದುರಿಸಲು ಪೊಲೀಸರು ರಾಸಾಯನಿಕ ಪ್ರಯೋಗ ಮಾಡಿದ್ದು, ಪ್ರತಿಯಾಗಿ ಪ್ರತಿಭಟನಕಾರರು ರಾಸಾಯನಿಕ ಪ್ರಯೋಗಿಸಿದ್ದರು ಎಂದು ಅವರು ಹೇಳಿದ್ದಾರೆ.

ಪ್ರತಿಭಟನಕಾರರ ಗುಂಪು ಕೃತಕ ತಡೆಗೋಡೆ ಒಡೆದು ಮುನ್ನುಗ್ಗಲು ಯತ್ನಿಸಿದಾಗ ಶಸ್ತ್ರಸಜ್ಜಿತರಾಗಿದ್ದ ಪೊಲೀಸರು ಇದನ್ನು ತಡೆಯಲು ಗುಂಡು ಹಾರಿಸಿದರು. ಆಗ ಗುಂಡು ಮಹಿಳೆಗೆ ಬಿದ್ದಿದೆ. ಡೆಮಾಕ್ರಾಟಿಕ್ ನ್ಯಾಷನಲ್ ಕಮಿಟಿ ಮತ್ತು ಮತ್ತು ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಕಚೇರಿ ಬಳಿ ತಲಾ ಒಂದು ಬಾಂಬ್ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT