ಶುಕ್ರವಾರ, ಮೇ 27, 2022
28 °C

ನಾಳೆ ಬೃಂದಾವನದಲ್ಲಿ ಕುಂಭಮೇಳ ಆರಂಭ

ಪಿಟಿಥ Updated:

ಅಕ್ಷರ ಗಾತ್ರ : | |

Prajavani

ಮಥುರಾ (ಉತ್ತರಪ್ರದೇಶ): ಇಲ್ಲಿನ ಉತ್ತರ ಪ್ರದೇಶ ಬ್ರಜ್‌ ತೀರ್ಥ ವಿಕಾಸ್‌ ಪರಿಷತ್‌ ಆಯೋಜಿಸುವ 40 ದಿನಗಳ ’ಕುಂಭ ಬೈಠಕ್‌‘ ಬೃಂದಾವನದಲ್ಲಿ ಭಾನುವಾರ ಆರಂಭವಾಗಲಿದೆ. ಪ್ರಸಿದ್ಧ ಹರಿದ್ವಾರ ಕುಂಭಮೇಳಕ್ಕೆ ಪೂರ್ವಭಾವಿಯಾಗಿ ಈ ಮೇಳ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೇಳದಲ್ಲಿ ಭಾರಿ ಸಂಖ್ಯೆಯಲ್ಲಿ ಸಂತರು ಹಾಗೂ ಸಾಧುಮುನಿಗಳು ಭಾಗವಹಿಸಲಿದ್ದು, ರಾಜ್ಯ ಸರ್ಕಾರವು ಭಾರಿ ಸಿದ್ದತೆಯನ್ನು ನಡೆಸಿದೆ ಎಂದು ಉತ್ತರ ಪ್ರದೇಶ ಬ್ರಜ್‌ ತೀರ್ಥ ವಿಕಾಸ್‌ ಪರಿಷತ್‌ನ ಉಪಾಧ್ಯಕ್ಷ ಶೈಲಜಕಾಂತ್‌ ಮಿಶ್ರಾ ತಿಳಿಸಿದ್ದಾರೆ.

’ಮೊದಲ ಪವಿತ್ರ ಸ್ನಾನ ಇದೇ 16ರಂದು ನಡೆಯಲಿದೆ. ಇದೇ 14ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೇಳ ಉದ್ಘಾಟಿಸಲಿದ್ದಾರೆ‘ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು