ಗುರುವಾರ , ಜುಲೈ 7, 2022
23 °C

ಗುಂಡು ಹಾರಿಸಿ ನಾಲ್ವರು ಸಹೋದ್ಯೋಗಿಗಳನ್ನು ಕೊಂದು, ತಾನು ಹತನಾದ ಬಿಎಸ್‌ಎಫ್‌ ಯೋಧ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಅಮೃತಸರ: ಪಂಜಾಬ್‌ನ ಅಮೃತಸರದ ಖಾಸಾ ಎಂಬಲ್ಲಿರುವ ಸೇನಾ ಶಿಬಿರದಲ್ಲಿ ಭಾನುವಾರ ದುರ್ಘಟನೆ ಸಂಭವಿಸಿದ್ದು, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಐವರು ಯೋಧರು ಮೃತಪಟ್ಟಿದ್ದಾರೆ.

ಬಿಎಸ್‌ಎಫ್‌ ಪೇದೆ ಸಾತೆಪ್ಪ ಎಸ್‌.ಕೆ ಎಂಬುವವರು ಐವರು ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಈ ಪೈಕಿ ನಾಲ್ವರು ಹತರಾದರೆ, ಘಟನೆಯಲ್ಲಿ ಗಾಯಗೊಂಡಿದ್ದ ಸಾತೆಪ್ಪ ಅವರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ‘ಐಎಎನ್‌ಎಸ್‌’ ವರದಿ ಮಾಡಿದೆ.

ಸಾತೆಪ್ಪ ಎಸ್‌.ಕೆ ಕರ್ನಾಟಕದವರಾಗಿದ್ದಾರೆ. 

ಅಟ್ಟಾರಿ ವಾಘಾ ಗಡಿಯಿಂದ 20 ಕಿ.ಮೀ ದೂರದಲ್ಲಿರುವ ಅಮೃತಸರದ ಖಾಸಾ ಎಂಬಲ್ಲಿನ ಸೇನಾ ಶಿಬಿರ ‘144 ಬಿಎನ್‌’ನಲ್ಲಿ ಈ ಅವಘಡ ನಡೆದಿದೆ.

ಘಟನೆ ಬಗ್ಗೆ ಸೇನೆಯು ತನಿಖೆಗೆ ಆದೇಶಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು