ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಂಸತ್‌ನಲ್ಲಿ ದ್ವೇಷ ಭಾಷಣ: ರಾಷ್ಟ್ರಪತಿ, ಪ್ರಧಾನಿಗೆ 100 ಜನರಿಂದ ಪತ್ರ

Last Updated 1 ಜನವರಿ 2022, 1:12 IST
ಅಕ್ಷರ ಗಾತ್ರ

ನವದೆಹಲಿ: ಹರಿದ್ವಾರದಲ್ಲಿ ಈಚೆಗೆ ನಡೆದಿದ್ದ ಧರ್ಮ ಸಂಸತ್‌ನಲ್ಲಿ, ಮುಸ್ಲಿಮರ ಹತ್ಯಾಕಾಂಡಕ್ಕೆ ಧಾರ್ಮಿಕ ಗುರುಗಳು ಕರೆ ನೀಡಿದ್ದರ ವಿರುದ್ಧ ಸೇನಾಪಡೆಗಳ ಐವರು ನಿವೃತ್ತ ಮುಖ್ಯಸ್ಥರೂ ಸೇರಿ 100ಕ್ಕೂ ಹೆಚ್ಚು ಜನರು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

‘ಮೂರು ದಿನಗಳ ಧರ್ಮ ಸಂಸತ್‌ನಲ್ಲಿ ಕಾರ್ಯಕ್ರಮದಲ್ಲಿ ಹಿಂದೂ ಸಾಧುಗಳು ಮತ್ತು ಇತರ ನಾಯಕರು ಮಾಡಿದ ಭಾಷಣದ ವಸ್ತು ಕೇಳಿ ನಾವು ವಿಚಲಿತರಾಗಿದ್ದೇವೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಲ್ಲಿ, ಪದೇ ಪದೇ ಕರೆ ನೀಡಲಾಯಿತು. ಹಿಂದೂ ಧರ್ಮವನ್ನು ಕಾಪಾಡಲುಅಗತ್ಯ ಬಂದರೆ ಶಸ್ತ್ರಗಳನ್ನು ಹಿಡಿದು ಮುಸ್ಲಿಮರನ್ನು ಹತ್ಯೆಮಾಡಿ ಎಂದು ಕರೆ ನೀಡಲಾಯಿತು. ಈ ರೀತಿ ಹಿಂಸೆಗೆ ಪ್ರಚೋದನೆ ನೀಡಲು ನಾವು ಅನುವು ಮಾಡಿಕೊಡಬಾರದು. ಈ ರೀತಿಯ ಪ್ರಚೋದನೆಗಳು ಆಂತರಿಕ ಭದ್ರತೆಯನ್ನು ಮಾತ್ರ ಹಾಳುಮಾಡುವುದಿಲ್ಲ. ಜೊತೆಗೆ ದೇಶದ ಸಾಮಾಜಿಕ ಸಂರಚನೆಗೂ ಹಾನಿ ಉಂಟುಮಾಡುತ್ತವೆ’ ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಮುಸ್ಲಿಮರ ವಿರುದ್ಧ ಶಸ್ತ್ರ ಕೈಗೆತ್ತಿಕೊಳ್ಳುವಂತೆ ಪೊಲೀಸರು ಮತ್ತು ಸೈನಿಕರಿಗೂ ಕರೆ ನೀಡಲಾಗಿದೆ. ಇವೆಲ್ಲವನ್ನು ತಡೆಗಟ್ಟಲು ನೀವು ಮಧ್ಯಪ್ರವೇಶಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT