ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್‌ ರೈಲು ಸೇವೆಗೆ 60 ಸಂಸದರ ಬೇಡಿಕೆ

Last Updated 21 ಫೆಬ್ರುವರಿ 2023, 14:45 IST
ಅಕ್ಷರ ಗಾತ್ರ

ನವದೆಹಲಿ: ವಂದೇ ಭಾರತ್‌ ರೈಲು ಸೇವೆಯು ಜನಪ್ರಿಯವಾಗುತ್ತಿರುವ ಕಾರಣ ಇದರ ಸೇವೆಯನ್ನು ತಮ್ಮ ಕ್ಷೇತ್ರಗಳಿಗೂ ಒದಗಿಸಬೇಕೆಂದು ಕೋರಿ ಎನ್‌ಡಿಎಯೇತರ 14 ಸಂಸದರು ಸೇರಿದಂತೆ 60 ಸಂಸದರು ರೈಲ್ವೆಗೆ ಮನವಿ ಸಲ್ಲಿಸಿದ್ದಾರೆ.

ಧಾರವಾಡ–ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸೇವೆ ಆರಂಭಿಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮನವಿ ಮಾಡಿದ್ದಾರೆ. ಗ್ವಾಲಿಯರ್‌ನಲ್ಲೂ ಇದರ ಸೇವೆ ಒದಗಿಸಬೇಕೆಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ರೈಲ್ವೆಗೆ ಮನವಿ ಮಾಡಿದ್ದಾರೆ.

ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಎಎಪಿಯ, ಕಾಂಗ್ರೆಸ್‌, ಸಿಪಿಎಂ, ವೈಎಸ್ಆರ್‌ಸಿಪಿ, ಅಪ್ನಾ ದಳ ಮತ್ತು ಶಿವಸೇನಾದ ಸಂಸದರು ಕೂಡ ಈ ರೈಲಿನ ಸೇವೆಗಾಗಿ ಕೋರಿಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೊಲ್ಲಾಪುರ –ಮುಂಬೈ ನಡುವೆ ವಂದೇ ಭಾರತ್‌ ರೈಲು ಸೇವೆ ಆರಂಭಿಸಬೇಕೆಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಕೂಡ ಮನವಿ ಮಾಡಿದ್ದಾರೆ.

ಸದ್ಯ 10 ವಂದೇ ಭಾರತ್‌ ರೈಲುಗಳು ದೇಶದ ವಿವಿಧೆಡೆ ಸಂಚಾರ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT