ಶುಕ್ರವಾರ, ಮೇ 27, 2022
31 °C

2020 ರಲ್ಲಿ ಭಾರತದಲ್ಲಿ 81.2 ಲಕ್ಷ ಜನ ಸಾವು: ಕೋವಿಡ್‌ನಿಂದ ಮೃತಪಟ್ಟವರೆಷ್ಟು?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2020 ರಲ್ಲಿ ಭಾರತದಲ್ಲಿ ಒಟ್ಟು 81.2 ಲಕ್ಷ ಜನ ವಿವಿಧ ಕಾರಣಗಳಿಂದ ಮೃತಪಟ್ಟಿದ್ದರು. ಅದರಲ್ಲಿ 1.48 ಲಕ್ಷ ಜನ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಹೇಳಿದೆ.

2019 ಕ್ಕೆ ಹೋಲಿಸಿದರೆ ಶೇ 6.2 ರಷ್ಟು ಹೆಚ್ಚು ಜನ 2020 ರಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಅಂದರೆ 2019 ರಲ್ಲಿ ಭಾರತದಲ್ಲಿ ಒಟ್ಟು 76.4 ಲಕ್ಷ ಜನ ಮೃತಪಟ್ಟಿದ್ದರು.

ಕೋವಿಡ್ ಕಾಣಿಸಿಕೊಂಡ ನಂತರ ಭಾರತದಲ್ಲಿ ಇದುವರೆಗೆ 5,23,889 ಲಕ್ಷ ಜನ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ, ಬಿಹಾರ್, ಗುಜರಾತ್, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ, ಅಸ್ಸಾಂ, ಹರಿಯಾಣ ರಾಜ್ಯಗಳಲ್ಲಿ ಜನರ ಸಾವುಗಳ ಸಂಖ್ಯೆ 2019 ಕ್ಕೆ ಹೋಲಿಸಿದರೆ 2020 ರಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಈ ರಾಜ್ಯಗಳಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಪ್ರಮಾಣ ಹೆಚ್ಚು ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಏತನ್ಮಧ್ಯೆ ಭಾರತದಲ್ಲಿ ಜನನ ನೋಂದಣಿ ಪ್ರಮಾಣ 2019 ಕ್ಕೆ ಹೋಲಿಸಿದರೆ ತುಸು ಕಡಿಮೆಯಾಗಿದೆ. 2019 ರಲ್ಲಿ 2.48 ಕೋಟಿ ಜನನ ನೋಂದಣಿಯಾಗಿದ್ದರೆ 20220 ರಲ್ಲಿ 2.42 ಕೋಟಿ ಮಕ್ಕಳ ಜನನ ನೋಂದಣಿಯಾಗಿತ್ತು. ಅಂದರೆ ಶೇ 2.4 ರಷ್ಟು ನೋಂದಣಿ ಕುಸಿತವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು