ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಕುಟುಂಬದ ₹ 1 ಕೋಟಿ ಉಳಿತಾಯವನ್ನು ಬೆಟ್ಟಿಂಗ್‌ಗೆ ಬಳಸಿದ ಪೋಸ್ಟ್‌ ಮಾಸ್ಟರ್‌!

ಅಕ್ಷರ ಗಾತ್ರ

ಭೋಪಾಲ್‌: ಪೋಸ್ಟ್‌ಮಾಸ್ಟರ್‌ ಒಬ್ಬರು ಗ್ರಾಹಕರಿಗೆ ಸೇರಿದ ಸುಮಾರು ₹ 1 ಕೋಟಿಯನ್ನು ಐಪಿಎಲ್‌ ಬೆಟ್ಟಿಂಗ್‌ಗೆ ಬಳಸಿಕೊಂಡ ಘಟನೆ ಮಧ್ಯ ಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ವರದಿಯಾಗಿದೆ.

ಸಾಗರ್ ಜಿಲ್ಲೆಯ ಬಿನಾ ಸಬ್‌-ಪೋಸ್ಟ್‌ ಆಫೀಸ್‌ನ ಪೋಸ್ಟ್‌ಮಾಸ್ಟರ್‌ ವಿಶಾಲ್‌ ಅಹಿರ್ವಾಲ್‌ ಗ್ರಾಹಕರ ದುಡ್ಡನ್ನು ನಕಲಿ ಸ್ಥಿರ ಠೇವಣಿ ಖಾತೆಗೆ ಸೇರಿಸಿ, ಐಪಿಎಲ್‌ನಲ್ಲಿ ಬೆಟ್ಟಿಂಗ್‌ಗೆ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಕಳೆದ 2 ವರ್ಷಗಳಲ್ಲಿ ಸುಮಾರು 24 ಕುಟುಂಬದವರಿಗೆ ಸೇರಿದ ₹ 1 ಕೋಟಿ ಮೊತ್ತವನ್ನು ಬೆಟ್ಟಿಂಗ್‌ಗೆ ಬಳಸಿ ಕಳೆದು ಹಾಕಿದ್ದಾನೆ.

ಮೇ 20ರಂದು ಬಿನಾ ಗವರ್ಮೆಂಟ್‌ ರೈಲ್ವೆ ಪೊಲೀಸ್‌(ಜಿಆರ್‌ಪಿ) ಆರೋಪಿ ವಿಶಾಲ್‌ನನ್ನು ಬಂಧಿಸಿದ್ದಾರೆ. ಗ್ರಾಹಕರ ಉಳಿತಾಯದ ಹಣವನ್ನು ವಂಚಿಸಿ ಬೆಟ್ಟಿಂಗ್‌ ಬಳಸಿಕೊಂಡಿದ್ದಾಗಿ ವಿಶಾಲ್‌ ತಪ್ಪೊಪ್ಪಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT