ಜೋಧಪುರ: ‘ಪಾತಕಿ ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯರಿಂದ ತನಗೆ ಜೀವಬೆದರಿಕೆ ಇದೆ’ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಪರ ವಕೀಲ ಹಸ್ತಿ ಮಾಲ್ ಸರಸ್ವತ್ ಹೇಳಿದ್ದಾರೆ. ಈ ಸಂಬಂಧ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಬಿಷ್ಣೋಯಿ ಹಾಗೂ ಆತನ ಸಹಚರ ಗೋಲ್ಡಿ ಬ್ರಾರ್ ಹೆಸರಿರುವ ಬೆದರಿಕೆ ಪತ್ರ ಜುಲೈ 3ರಂದು ಕಚೇರಿಯ ಬಾಗಿಲ ಬಳಿ ಸಿಕ್ಕಿದೆ’ ಎಂದು ಸರಸ್ವತ್ ದೂರಿನಲ್ಲಿ ತಿಳಿಸಿದ್ದಾರೆ.

‘ಪತ್ರದ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ. ಸರಸ್ವತ್ ಅವರ ಭದ್ರತೆಗಾಗಿ ಸಿಬ್ಬಂದಿಯೊಬ್ಬರನ್ನು ನಿಯೋಜಿಸಲಾಗಿದೆ’ ಎಂದು ಮಹಾಮಂದಿರ್ ಪೊಲೀಸ್ ಠಾಣೆಯ ಅಧಿಕಾರಿ ಲೇಖ್ ರಾಜ್ ಸಿಹಾಗ್ ಹೇಳಿದ್ದಾರೆ.

ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಬಿಷ್ಣೋಯಿಯನ್ನು ಪಂಜಾಬ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.