ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮೀಯನಾಗಿದ್ದಕ್ಕೆ ಹೆಮ್ಮೆ ಇದೆ: ರಾಮದಾಸ್ ಆಠವಲೆ

Last Updated 16 ಅಕ್ಟೋಬರ್ 2022, 16:03 IST
ಅಕ್ಷರ ಗಾತ್ರ

ನವದೆಹಲಿ: ‘ಬೌದ್ಧಧರ್ಮಕ್ಕೆ ಮತಾಂತರವಾಗುವ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ್ದ 22 ಪ್ರತಿಜ್ಞೆಗಳನ್ನು ಬೆಂಬಲಿಸುತ್ತೇನೆ. ನಾನು ಬೌದ್ಧ ಧರ್ಮೀಯನಾಗಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಕೇಂದ್ರ ಸಚಿವ ರಾಮದಾಸ್ ಆಠವಲೆ ಹೇಳಿದ್ದಾರೆ.

‘ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿರುವ ಈ 22 ಪ್ರತಿಜ್ಞೆಗಳನ್ನು ನಾವು ಸ್ವೀಕರಿಸುತ್ತೇವೆ ಮತ್ತು ನಾನು ಈ 22 ಪ್ರತಿಜ್ಞೆಗಳನ್ನು ಬೌದ್ಧ ಧರ್ಮದವನಾಗಿ ಬೆಂಬಲಿಸುತ್ತೇನೆ. ಅಂಬೇಡ್ಕರ್ ತೆಗೆದುಕೊಂಡ ಈ 22 ಪ್ರತಿಜ್ಞೆಗಳು ನಮಗೆ ಹೆಮ್ಮೆಯ ವಿಷಯ ಮತ್ತು ನಾವೆಲ್ಲರೂನಮ್ಮ ಜೀವನದಲ್ಲಿ ಅವುಗಳನ್ನು ಸ್ವೀಕರಿಸಬೇಕು’ ಎಂದು ಆಠವಲೆ ಟ್ವೀಟ್ ಮಾಡಿದ್ದಾರೆ.

ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಎಂಬುದನ್ನು ಒಳಗೊಂಡಿರುವ ಈ ಪ್ರತಿಜ್ಞೆಗಳು ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ದೆಹಲಿ ಸರ್ಕಾರದ ಸಚಿವರಾಗಿದ್ದ ಎಎಪಿಯ ಮುಖಂಡ ರಾಜೇಂದ್ರ ಪಾಲ್ ಗೌತಮ್ ಅವರು ಬೌದ್ಧ ಧರ್ಮ ಮತಾಂತರ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ವಿರೋಧಿಸಿ ಬಿಜೆಪಿ ತೀವ್ರವಾಗಿ ಪ್ರತಿಭಟನೆ ನಡೆಸಿತ್ತು.

ತಮ್ಮ ನಡೆಯಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಧಕ್ಕೆಯಾಗಬಾರದು ಮತ್ತು ಮುಂಬರುವ ವಿಧಾನಸಭೆಯಲ್ಲಿ ಪಕ್ಷದ ವರ್ಚಸ್ಸಿಗೆ ಕುಂದುಂಟಾಗಬಾರದು ಎಂದು ಗೌತಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT