ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ: ಸಿದ್ಧತೆ ಪರಿಶೀಲಿಸಿದ ಉತ್ತರಾಖಂಡ ಸಿಎಂ ಧಾಮಿ

Last Updated 3 ನವೆಂಬರ್ 2021, 10:22 IST
ಅಕ್ಷರ ಗಾತ್ರ

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 5ರಂದು ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ.

ಸಚಿವ ಸಂಪುಟ ಸಹೋದ್ಯೋಗಿಗಳಾದ ಹರಕ್ ಸಿಂಗ್ ರಾವತ್, ಸುಬೋಧ್ ಉನಿಯಾಲ್ ಜತೆ ಸ್ಥಳಕ್ಕೆ ಭೇಟಿ ನೀಡಿದ ಧಾಮಿ, ದೇಗುಲದ ಬಳಿ ನಡೆಯುತ್ತಿರುವ ಎಲ್ಲ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.

‘ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಕೆಲವು ಸಣ್ಣ ಕೆಲಸಗಳು ಬಾಕಿ ಇದ್ದು ಬುಧವಾರ ಸಂಜೆ ವೇಳೆಗೆ ಕೊನೆಗೊಳ್ಳಲಿವೆ’ ಎಂದು ಧಾಮಿ ಹೇಳಿದ್ದಾರೆ.

‘ಜಗತ್ತಿನೆಲ್ಲೆಡೆಯ ಜನರು ಶಾಂತಿಗಾಗಿ ಆಗಮಿಸುವ ಈ ಕ್ಷೇತ್ರವನ್ನು ವಿಶ್ವದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಜಧಾನಿಯನ್ನಾಗಿ ಮಾಡಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಧಾನಿಯವರ ಆಶಯವನ್ನು ಸಾಕಾರಗೊಳಿಸಲು ಕೇದಾರನಾಥದಲ್ಲಿ ಅಭಿವೃದ್ಧಿಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಮೋದಿ ಅವರು ಕೇದಾರನಾಥ ಭೇಟಿ ವೇಳೆ ₹400 ಕೋಟಿ ಮೊತ್ತದ ಕೇದಾರಪುರಿ ಮರುನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜತೆಗೆ, ಮರು ನಿರ್ಮಾಣಗೊಂಡಿರುವ ಆದಿ ಗುರು ಶಂಕರಾಚಾರ್ಯರ ಸಮಾಧಿ ಮತ್ತು ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಶಂಕರಾಚಾರ್ಯರ ಸಮಾಧಿಗೆ 2013ರ ಪ್ರವಾಹದ ಸಂದರ್ಭ ಹಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT