ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಜಾದಿಂದ ಕೊಚ್ಚಿಗೆ ಬಂದ ವಿಮಾನದಲ್ಲಿ ಹೈಡ್ರಾಲಿಕ್‌ ವೈಫಲ್ಯ: ತಪ್ಪಿದ ದುರಂತ

Last Updated 15 ಜುಲೈ 2022, 16:06 IST
ಅಕ್ಷರ ಗಾತ್ರ

ಕೊಚ್ಚಿ: ಶಾರ್ಜಾದಿಂದ 222 ಪ್ರಯಾಣಿಕರನ್ನು ಕರೆದುಕೊಂಡು ಬಂದ ‘ಏರ್ ಅರೇಬಿಯಾ’ ವಿಮಾನದಲ್ಲಿ ತಾಂತ್ರಿಕ ದೋಷ (ಹೈಡ್ರಾಲಿಕ್ ವೈಫಲ್ಯ) ಕಾಣಿಸಿಕೊಂಡ ಪರಿಣಾಮ ಕೇರಳದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕೆಲ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ವಿಮಾನವು ಲ್ಯಾಂಡ್ ಆಗಿದ್ದು ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ‘ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಸಿಐಎಎಲ್) ತಿಳಿಸಿದೆ.

ಏರ್ ಅರೇಬಿಯಾ ‘ಜಿ9–426’ ವಿಮಾನವು ಸಂಜೆ 7.13ಕ್ಕೆ ಲ್ಯಾಂಡ್ ಆಗಬೇಕಿತ್ತು. ವಿಮಾನವು ತಾಂತ್ರಿಕ ದೋಷ (ಹೈಡ್ರಾಲಿಕ್ ಫೈಲ್ಯೂರ್) ಎದುರಿಸುತ್ತಿದೆ ಎಂದು ತಿಳಿದ ಕೂಡಲೇ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನವು 9ನೇ ರನ್‌ವೇಯಲ್ಲಿ 7.29ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಳಿಕ ತುರ್ತು ಪರಿಸ್ಥಿತಿ ಹಿಂಪಡೆಯಲಾಯಿತು ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಸಿಐಎಎಲ್ ಮಾಹಿತಿ ನೀಡಿದೆ.

‘ಏರ್ ಅರೇಬಿಯಾ’ ವಿಮಾನಯಾನ ಸಂಸ್ಥೆ ಈವರೆಗೆ ಹೇಳಿಕೆ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT