ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಸಿಕೆ ಸಾಗಣೆಗೆ ವಿಮಾನ ನಿಲ್ದಾಣ ಸಿದ್ಧತೆ

Last Updated 22 ನವೆಂಬರ್ 2020, 14:40 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದ ಪ್ರಾರಂಭದಲ್ಲಿ ಕೊರೊನಾ ಲಸಿಕೆಗಳು ಲಭ್ಯವಾಗುವ ನಿರೀಕ್ಷೆಯಿದೆ. ಹೀಗಾಗಿ, ಲಸಿಕೆಗಳನ್ನು ಸಾಗಿಸಲು ಪ್ರತ್ಯೇಕ ಸರಕು ಸಾಗಣೆ ವಿಮಾನಗಳ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನಿಯಂತ್ರಿತ ತಾಪಮಾನ ವ್ಯವಸ್ಥೆ ಹೊಂದಿರುವ ವಿಮಾನಗಳಲ್ಲಿ ಲಸಿಕೆಗಳನ್ನು ಸಾಗಿಸುವುದರ ಜೊತೆಗೆ ಕಡಿಮೆ ಅವಧಿಯಲ್ಲಿ ಹೆಚ್ಚು ವೇಗವಾಗಿ ಇವುಗಳನ್ನು ವಿತರಿಸಲು ಸಾಧ್ಯವಾಗುವ ರೀತಿಯಲ್ಲಿ ವಿಮಾನ ನಿಲ್ದಾಣಗಳ ಮುಖ್ಯಸ್ಥರು ಯೋಜನೆ ರೂಪಿಸುತ್ತಿದ್ದಾರೆ.

ಲಸಿಕಾ ತಯಾರಿಕ ಸಂಸ್ಥೆಗಳಾದ ಮಡೆರ್ನಾ, ಫೈಜರ್‌, ಭಾರತ್ ಬಯೋಟೆಕ್, ಸೆರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ ಜತೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದ್ದು, ಲಸಿಕೆಯ ಪ್ರಾಯೋಗಿಕ ಹಂತಗಳ ಬಗ್ಗೆ ನಿಗಾ ವಹಿಸುತ್ತಿದೆ.

‘ಮುಂಬೈ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಪುಣೆ, ಕೋಲ್ಕತ್ತ, ದೆಹಲಿ ಮತ್ತು ಬೆಂಗಳೂರಿನಲ್ಲಿ ಎಂಟು ಫಾರ್ಮಾ ಗ್ರೇಡ್ ಕಂಡೀಷನಿಂಗ್ ಕೊಠಡಿಗಳನ್ನು ನಾವು ಹೊಂದಿದ್ದೇವೆ. ಈ ಕೊಠಡಿಗಳು ಸರಕು ಸಾಗಣೆ ವಿಮಾನ ಸಂಸ್ಥೆಯ ಸಮೀಪದಲ್ಲಿದ್ದು, ಲಸಿಕೆ ತ್ವರಿತ ವಿತರಣೆಗೆ ನೆರವಾಗಲಿದೆ’ ಎಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT