ಸೋಮವಾರ, ಮೇ 23, 2022
30 °C

ಸಲಿಂಗ ವಿವಾಹ: ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲಹಾಬಾದ್‌: ಹಿಂದೂ ವಿವಾಹ ಕಾಯ್ದೆ ಸಲಿಂಗ ವಿವಾಹವನ್ನು ವಿರೋಧಿಸುವುದಿಲ್ಲ. ಹಾಗಾಗಿ ತಮ್ಮ ವಿವಾಹವನ್ನು ಮಾನ್ಯ ಮಾಡಬೇಕು ಎಂದು ಇಬ್ಬರು ಮಹಿಳೆಯರು ಮಾಡಿದ ಮನವಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿದೆ.

ಮಹಿಳೆಯರ ಮನವಿಯನ್ನು ವಿರೋಧಿಸಿದ ಉತ್ತರಪ್ರದೇಶ ಸರ್ಕಾರದ ವಕೀಲರು, ‘ಸಲಿಂಗ ವಿವಾಹವು ಭಾರತೀಯ ಸಂಸ್ಕೃತಿಗೆ ಹಾಗೂ ಧರ್ಮಕ್ಕೆ ವಿರೋಧವಾಗಿದೆ. ಈ ವಿವಾಹ ಭಾರತೀಯ ಕಾನೂನಿನ ಪ್ರಕಾರ ಅಸಿಂಧುವಾಗಿದೆ‘ ಎಂದು ಹೇಳಿದರು.

ಈ ಇಬ್ಬರು ಮಹಿಳೆಯರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌, ‘ವಿವಾಹ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ಸಮ್ಮಿಲನವಲ್ಲ. ಅದು ಗಂಡು ಮತ್ತು ಹೆಣ್ಣನ್ನು ಬೆಸೆಯುವ ಕೊಂಡಿ. ಆದ್ದರಿಂದ ಕೇಂದ್ರ ಸರ್ಕಾರ ಈ ವಿವಾಹವನ್ನು ವಿರೋಧಿಸುತ್ತದೆ’ ಎಂದು ಹೇಳಿದರು.

ಅಂಜು ದೇವಿ ಎಂಬುವವರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯಲ್ಲಿ, ತಮ್ಮ  23 ವರ್ಷದ ಮಗಳನ್ನು 22 ವರ್ಷದ ಮಹಿಳೆಯೊಬ್ಬರು ವಶಕ್ಕೆ ಪಡೆದಿದ್ದಾರೆ. ಆದ್ದರಿಂದ ಮಗಳನ್ನು ತಮ್ಮ ವಶಕ್ಕೆ ಕೊಡಿಸಬೇಕೆಂದು ಕೋರಿದ್ದರು. ಏಪ್ರಿಲ್‌ 6ರಂದು ಅರ್ಜಿಯ ವಿಚಾರಣೆಯನ್ನು ಕೈಗೊಂಡ ಅಲಹಾಬಾದ್‌ ಹೈಕೋರ್ಟ್‌, ಏಪ್ರಿಲ್ 7ರಂದು ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಗೆ ಇಬ್ಬರೂ ಮಹಿಳೆಯರು ಹಾಜರಿರುವುದನ್ನು ಖಚಿತಪಡಿಸಬೇಕೆಂದು ರಾಜ್ಯ ಸ‌ರ್ಕಾರಿ ವಕೀಲರಿಗೆ ನಿರ್ದೇಶನ ನೀಡಿತ್ತು.

ಏಪ್ರಿಲ್‌ 7ರಂದು ಕೋರ್ಟ್‌ಗೆ ಹಾಜರಾದ ಮಹಿಳೆಯರು ತಾವು ಇಬ್ಬರು ಮದುವೆಯಾಗಿರುವುದಾಗಿ ತಿಳಿಸಿ ಮದುವೆಯನ್ನು ಗುರುತಿಸಬೇಕು ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು