ಶನಿವಾರ, ನವೆಂಬರ್ 28, 2020
26 °C

ಭಯೋತ್ಪಾದಕರ ದಾಳಿ ಎದುರಿಸಲು ರಕ್ಷಣಾ ಪಡೆಗಳು ಸಜ್ಜಾಗಿರಬೇಕು: ಭದೌರಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಪ್ರಸ್ತುತ ಯುದ್ದ ಎನ್ನುವುದು ಅನಿರೀಕ್ಷಿತ ಭದ್ರತಾ ಸನ್ನಿವೇಶಗಳ ಜತೆಗೆ ಅತ್ಯಂತ ಸಂಕೀರ್ಣ ಮತ್ತು ಬಹು ಆಯಾಮಗಳಿಂದ ಕೂಡಿದೆ ಎಂದು ವಾಯುಸೇನೆ ಮುಖ್ಯಸ್ಥ ಆರ್.‌ಕೆ.ಎಸ್‌‌ ಭದೌರಿಯಾ ಹೇಳಿದರು.

ಇಂಥ ಪರಿಸ್ಥಿತಿಯಲ್ಲಿ ಭಯೋತ್ಪಾದಕರು ನಡೆಸುವಂತಹ (ಹೈಬ್ರಿಡ್‌) ದಾಳಿಗಳನ್ನು ಎದುರಿಸಲು ರಕ್ಷಣಾ ಪಡೆಗಳು ಸನ್ನದ್ಧವಾಗಿರಬೇಕು ಎಂದು ಅವರು ತಿಳಿಸಿದರು.

ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿಯ (ಎನ್‌ಡಿಎ) 139ನೇ ಕೋರ್ಸ್‌ನ ವಿದ್ಯಾರ್ಥಿಗಳ ನಿರ್ಗಮನದ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಹುದ್ದೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ)ಯನ್ನು ಸೃಷ್ಟಿಸಿರುವುದು, ರಕ್ಷಣಾ ಕ್ಷೇತ್ರದ ಸುಧಾರಣೆಗೆ ಕಾರಣವಾಗುತ್ತದೆ ಎಂದು ಅವರು ಶ್ಲಾಘಿಸಿದರು.

‘ಎನ್‌ಡಿಎ ಕೇವಲ ನಾಯಕತ್ವ ಸೃಷ್ಟಿಸುವ ತಾಣವಷ್ಟೇ ಅಲ್ಲ, ಬದಲಿಗೆ ಜಂಟಿಯಾಗಿ ಕಾರ್ಯ ನಿರ್ವಹಣೆಯನ್ನು ಸೃಷ್ಟಿಸುವ ತಾಣವಾಗಿದೆ. ಈ ಜಂಟಿ ತರಬೇತಿಯ ಅಪಾರ ಅನುಭವವನ್ನು ಆಯಾ ಅಕಾಡೆಮಿಗಳಿಗೆ ಕೊಂಡೊಯ್ಯಬೇಕಿದೆ‘ ಎಂದು ಅವರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು