ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್

Last Updated 2 ಜನವರಿ 2022, 14:40 IST
ಅಕ್ಷರ ಗಾತ್ರ

ಜಿಂದ್‌: ಹರಿಯಾಣದ ಜಿಂದ್‌ ಜಿಲ್ಲೆಯಲ್ಲಿಪಂಜಾಬ್‌ನ ಬತಿಂಡಾದಿಂದ ದೆಹಲಿಗೆ ಹೊರಟಿದ್ದ ಸೇನೆಯ ಹೆಲಿಕಾಪ್ಟರ್‌ವೊಂದು ಜಾಜಾನ್ವಾಲಾ ಗ್ರಾಮದ ಕೃಷಿ ಭೂಮಿಯೊಂದರಲ್ಲಿ ಭಾನುವಾರ ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ.

ಹೆಲಿಕಾಪ್ಟರ್‌ನಲ್ಲಿ ಸೇನೆಯ ನಾಲ್ವರು ಸಿಬ್ಬಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.‘ತಾಂತ್ರಿಕ ಸಮಸ್ಯೆಯಿಂದ ಭೂಸ್ಪರ್ಶ ಮಾಡಿರಬಹುದು. ಈ ಬಗ್ಗೆ ಸೇನಾ ಅಧಿಕಾರಿಗಳೇ ಹೆಚ್ಚಿನ ಮಾಹಿತಿ ನೀಡಬೇಕು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ವಿಷಯ ತಿಳಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಇತ್ತೀಚೆಗೆ ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ಮೂರು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ಸೇರಿ 14 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT