ಬುಧವಾರ, ಜೂನ್ 16, 2021
22 °C

ಕೇಜ್ರಿವಾಲ್‌ ಕ್ಷಮೆ ಕೇಳಬೇಕು: ಸಿಂಗಪುರ ನೆಟ್ಟಿಗರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್‌ ತಳಿ ಅತ್ಯಂತ ಅಪಾಯಕಾರಿ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು’ ಎಂದು ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಿಂಗಪುರ ಜನರು ಆಗ್ರಹಿಸಿದ್ದಾರೆ.

‘ಸಿಂಗಪುರದಲ್ಲಿ ಕಂಡು ಬಂದಿರುವ ವೈರಸ್‌ನ ತಳಿ ಮೂರನೇ ಅಲೆ ರೂಪದಲ್ಲಿ ದೆಹಲಿಯನ್ನು ತಲುಪಬಹುದು. ಕೂಡಲೇ ಸಿಂಗಪುರ ಮತ್ತು ಭಾರತ ನಡುವೆ ವಿಮಾನ ಸಂಚಾರ ರದ್ದುಪಡಿಸುವಂತೆ’ ಕೇಜ್ರಿವಾಲ್‌ ಮಂಗಳವಾರ ಟ್ವೀಟ್‌ ಮಾಡಿದ್ದರು.

ಸಿಂಗಪುರದ ಪ್ರಮುಖ ಬ್ಲಾಗರ್‌ ಆಗಿರುವ ಬ್ರೌನ್‌ ಎಂಬುವವರು, ‘ದೆಹಲಿ ಮುಖ್ಯಮಂತ್ರಿಯವರೇ,  ವೈರಸ್‌ನ ಬಿ.1.617 ತಳಿ ನಿಮ್ಮ ದೇಶದಿಂದಲೇ ಬಂದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸಿಂಗಪುರ ವಿದೇಶಾಂಗ ಸಚಿವ ವಿವಿಯನ್‌ ಬಾಲಕೃಷ್ಣನ್‌ ಅವರು ಸಹ ಟ್ವೀಟ್‌ ಮಾಡಿದ್ದು, ‘ಸಿಂಗಪುರ ತಳಿ ಎಂಬುದೇ ಇಲ್ಲ. ರಾಜಕಾರಣಿಗಳು ವಾಸ್ತವಾಂಶ ಅರಿಯಬೇಕು’ ಎಂದಿದ್ದಾರೆ. ಅಲ್ಲದೇ, ಕೇಜ್ರಿವಾಲ್‌ ಹೇಳಿಕೆಯಿಂದ ಉಂಟಾದ ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಧನ್ಯವಾದ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು