ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ ನಮ್ಮ ಸರ್ಕಾರದ ವಿಫಲತೆ ತೋರುತ್ತದೆ: ಅಸ್ಸಾಂ ಸಿ.ಎಂ

Last Updated 16 ಮಾರ್ಚ್ 2023, 12:19 IST
ಅಕ್ಷರ ಗಾತ್ರ

ಗುವಾಹಟಿ: ‘ಅಸ್ಸಾಂನ (ಎಸ್‌ಇಬಿಎ) 10ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ನಮ್ಮ ಸರ್ಕಾರದ ವೈಫಲ್ಯವನ್ನು ತೋರುತ್ತದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಗುರುವಾರ ಹೇಳಿದ್ದಾರೆ.

ಅಸ್ಸಾಂ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಅವರು ಮಾತನಾಡಿದರು. ‘ಮೆಟ್ರಿಕ್‌ (10ನೇ ತರಗತಿ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಂಥ ಪ್ರಕರಣಗಳು ನಡೆಯಲೇಬಾರದು. ಇದು ನಮ್ಮ ವಿಫಲತೆಯನ್ನು ತೋರುತ್ತದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಶಾಲೆಯೊಂದರ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಈ ಹಗರಣದ ಪ್ರಮುಖ ಆಪಾದಿತ. ಜೊತೆಗೆ, ಮೂವರು ಇತರ ಶಿಕ್ಷಕರೂ ಈ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ’ ಎಂದರು.

ಈ ಹಗರಣದ ಹಿಂದಿರುವವರನ್ನು ಪತ್ತೆ ಮಾಡಲಾಗುವುದು ಎಂದರು.

‘ಎಸ್‌ಇಬಿಎ ಬಲಪಡಿಸಲು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಸ್ಸಾಂ ಪೊಲೀಸರು ಈ ಪ್ರಕರಣವನ್ನು 48 ಗಂಟೆಗಳ ಒಳಗೆ ಭೇದಿಸಿದ್ದಾರೆ. ಆರೋಪಿಗಳು ಪೊಲೀಸರ ಎದುರು ಶರಣಾಗಿ, ಈ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಬಿಸ್ವಾ ಹೇಳಿದರು.

ಮಾರ್ಚ್‌ 13ರಂದು 10ನೇ ತರಗತಿ ಸಾಮಾನ್ಯ ವಿಜ್ಞಾನ ಪರೀಕ್ಷೆ ನಿಗದಿಯಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT