ಗುರುವಾರ , ಆಗಸ್ಟ್ 18, 2022
24 °C

ಪ್ರತಿಪಕ್ಷದ ಶಾಸಕರಿಗೆ ಬಿಜೆಪಿಗೆ ಸೇರಲು ಅಸ್ಸಾಂ ಮುಖ್ಯಮಂತ್ರಿ ಆಹ್ವಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ರಾಜ್ಯದ ಪ್ರತಿಪಕ್ಷದ ಶಾಸಕರು ಆಡಳಿತ ಪಕ್ಷವಾದ ಬಿಜೆಪಿಗೆ ಸೇರುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಹ್ವಾನ ನೀಡಿದ್ದಾರೆ.

ನಾಲ್ಕು ಬಾರಿಯ ಕಾಂಗ್ರೆಸ್‌ ಶಾಸಕರಾಗಿದ್ದ ರೂಪಜ್ಯೋತಿ ಕುರ್ಮಿ ಅವರು ಬಿಜೆಪಿ ಸೇರುವುದಾಗಿ ಪ್ರಕಟಿಸಿದ ಮರು ದಿನವಾದ ಶನಿವಾರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

‘ವಿರೋಧ ಪಕ್ಷದಲ್ಲಿ ಐದು ವರ್ಷ ಇದ್ದು ಏನು ಮಾಡುತ್ತೀರಿ. ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ. ಜಾತಿ, ಧರ್ಮ, ಪ್ರದೇಶದ ತಾರತಮ್ಯಗಳನ್ನು ಬಿಟ್ಟು ಜನರ ಕಲ್ಯಾಣಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ನಮ್ಮೊಂದಿಗೆ ಸೇರಿ’ ಎಂದು ಮನವಿ ಮಾಡಿದರು.

ಕುರ್ಮಿ ಅವರು ಸೋಮವಾರ ಬಿಜೆಪಿ ಸೇರಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು