ಮಂಗಳವಾರ, ಜನವರಿ 31, 2023
27 °C

ಅಸ್ಸಾಂ– ಮೇಘಾಲಯ ಗಡಿ ಹಿಂಸಾಚಾರ: ಮಾಹಿತಿ ಪಡೆದ ಎನ್‌ಎಚ್‌ಆರ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ (ಪಿಟಿಐ): ಅಸ್ಸಾಂ ಮತ್ತು ಮೇಘಾಲಯ ಗಡಿಯಲ್ಲಿನ ವಿವಾದತ್ಮಕ ಪ್ರದೇಶದಲ್ಲಿ ಈಚೆಗೆ ಹಿಂಸಾಚಾರ ಸಂಭವಿಸಿ ಆರು ಜನರು ಮೃತಪಟ್ಟ ಘಟನೆ ಕುರಿತು ಮಾಹಿತಿ ಪಡೆಯಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಮಂಗಳವಾರ ತಿಳಿಸಿದೆ. 

‘ನವೆಂಬರ್‌ 22ರಂದು ಮೇಘಾಲಯದ ಜೈನಿತಾ ಹಿಲ್ಸ್‌ ಜಿಲ್ಲೆಯಲ್ಲಿ ಅಸ್ಸಾಂ ಪೊಲೀಸರು ಮತ್ತು ಅಸ್ಸಾಂ ಅರಣ್ಯ ರಕ್ಷಣಾ ಸಿಬ್ಬಂದಿ  ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಅಸ್ಸಾಂ ಅರಣ್ಯ ಅಧಿಕಾರಿ ಸೇರಿ ಆರು ಜನರು ಮೃತಪಟ್ಟಿದ್ದರು. ಈ ಪ್ರಕರಣ ಕುರಿತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಕೆ. ಸಂಗ್ಮಾ ಅವರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಎನ್‌ಎಚ್‌ಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೇ, ಈ ಹಿಂಸಾಚಾರವು ಸುದೀರ್ಘ ಕಾಲದ ಗಡಿ ವಿವಾದದ ಪರಿಣಾಮವಾಗಿದೆ. ಈ ವಿವಾದವನ್ನು ಮೊದಲೇ ಇತ್ಯರ್ಥಗೊಳಿಸಿದ್ದರೆ ಇಂಥ ಘಟನೆ ನಡೆಯುತ್ತಿರಲಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ವಿವಾದಿತ ಪ್ರದೇಶಗಳಲ್ಲಿ ಈ ರೀತಿಯ ಹಿಂಸಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಲು ಕೇಂದ್ರ ಗೃಹ ಸಚಿವಾಲಯ ಮತ್ತು ಅಸ್ಸಾಂ ಮುಖ್ಯ ಕಾರ್ಯದರ್ಶಿಗೆ ಎನ್‌ಎಚ್‌ಆರ್‌ಸಿ ಸೂಚಿಸಿದೆ ಮತ್ತು ಪ್ರತಿಕ್ರಿಯೆ ನೀಡಲು 2 ವಾರಗಳ ಗಡುವನ್ನೂ ನೀಡಿದೆ. 

ಮೇಘಾಲಯಕ್ಕೆ ಮರಮುಟ್ಟುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾದ ಟ್ರಕ್‌ಅನ್ನು ಅಸ್ಸಾಂನ ಮುಕ್ರೋಹ್‌ ಗ್ರಾಮದ ಬಳಿ ಅಸ್ಸಾಂ ಅರಣ್ಯ ಸಿಬ್ಬಂದಿ ತಡೆದು ನಿಲ್ಲಿಸಿದ್ದರು. ಈ ವೇಳೆ ಘರ್ಷಣೆ ಸಂಭವಿಸಿ ಮೇಘಾಲಯದ ಐದು ಮಂದಿ ಮತ್ತು ಅಸ್ಸಾಂನ ಒಬ್ಬ ಅರಣ್ಯ ಅಧಿಕಾರಿ ಮೃತಪಟ್ಟಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು