ಗುರುವಾರ , ಡಿಸೆಂಬರ್ 1, 2022
27 °C

ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಳುಗಿ ಏಳು ಮಂದಿ ನಾಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ: ಪಶ್ಚಿಮ ಅಸ್ಸಾಂನ ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರದಲ್ಲಿ ಗುರುವಾರ ಬೆಳಿಗ್ಗೆ ನಾಡ ದೋಣಿ ಮುಳುಗಿ, ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ಹಾಗೂ ಇತರೆ ಆರು ಮಂದಿ ನಾಪತ್ತೆಯಾಗಿದ್ದಾರೆ.

ಧುಬ್ರಿಯ ವೃತ್ತ ಅಧಿಕಾರಿ, ಭೂಕಂದಾಯ ಅಧಿಕಾರಿ ಮತ್ತೊಬ್ಬ ಸಿಬ್ಬಂದಿ ಬೆಳಿಗ್ಗೆ 10.30ಕ್ಕೆ ನದಿ ದ್ವೀಪದ ಪರಿಶೀಲನೆಗಾಗಿ ಧುಬ್ರಿಯಲ್ಲಿ ದೋಣಿ ಹತ್ತಿದ ನಂತರ ಈ ಘಟನೆ ನಡೆದಿದೆ. 

ದೋಣಿಯಲ್ಲಿ ಅಧಿಕಾರಿಗಳು ಸೇರಿದಂತೆ 29 ಪ್ರಯಾಣಿಕರಿದ್ದರು. ಸ್ಥಳೀಯ ಜನರು ಮತ್ತು ರಾಜ್ಯ ವಿಪತ್ತು ಪಡೆ ಸಿಬ್ಬಂದಿ ಹಲವರನ್ನು ರಕ್ಷಿಸಿದೆ. ನಾಪತ್ತೆಯಾದವರ ಪತ್ತೆಗೆ ರಕ್ಷಣಾ ಕಾರ್ಯ ಮುಂದುವರಿದಿದೆ. 

ಇದನ್ನೂ ಓದಿ: 

ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ದೋಣಿ ಮಗುಚಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.ಅರ್ಧ ಕಂಬ ನಿರ್ಮಿಸಲಾಗಿದ್ದು, ಅದು ನೀರಿನ ಅಡಿಯಲ್ಲಿತ್ತು. ದೋಣಿ ಚಾಲಕನು ಅದನ್ನು ನೋಡದೆ ಕಂಬಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಾಡ ದೋಣಿ ಸರಕು ಸಾಗಣೆಗೆ ಮಾತ್ರ ಮೀಸಲಾಗಿತ್ತು. ಅಧಿಕಾರಿ ಮತ್ತು ಇತರರು ಏಕೆ ಪ್ರಯಾಣಿಸುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು