ಬಲ್ಲಿಯಾ, ಉತ್ತರಪ್ರದೇಶ: ಪಾತಕಿ ಅತೀಕ್ ಅಹ್ಮದ್‌ನನ್ನು ಜೈಲಿನಿಂದ ಹೊರತಂದು ಎನ್‌ಕೌಂಟರ್ ಮಾಡಿ ಎಂದು ಬಿಜೆಪಿಯ ಮಾಜಿ ಸಂಸದ ಹರಿನಾರಾಯಣ್ ರಾಜ್‌ಭರ್ ಗುರುವಾರ ಹೇಳಿದ್ದಾರೆ.
ಇದನ್ನು ಮಾಡುವ ಪೊಲೀಸ್‌ಗೆ ಸ್ವರ್ಗದ ಬಾಗಿಲು ತೆರೆಯಲಿದೆ ಎಂದೂ ತಿಳಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಬಳಿಕ ಹರಿನಾರಾಯಣ್ ಅವರು ಈ ಹೇಳಿಕೆ ನೀಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾಗಿರುವ ಇಬ್ಬರೂ ಅತೀಕ್ ಅಹಮ್ಮದ್‌ನ ಸಹಚರರಾಗಿದ್ದರು.
‘ಜೈಲಿನಲ್ಲಿದ್ದುಕೊಂಡೇ ಅತೀಕ್, ಕೊಲೆಗೆ ಸಂಚು ರೂಪಿಸಿದ್ದ ಮತ್ತು ಆತ ಹಲವು ಜನರನ್ನು ಕೊಂದು ಬಡವರ ಆಸ್ತಿಯನ್ನು ಕಬಳಿಸಿದ್ದಾನೆ’ ಎಂದೂ ರಾಜ್‌ಭರ್ ಅವರು ಆರೋಪಿಸಿದ್ದಾರೆ.
ಉತ್ತರಪ್ರದೇಶ ಪೊಲೀಸರು ನಡೆಸಿರುವ ಪ್ರತ್ಯೇಕ ಎನ್‌ಕೌಂಟರ್‌ಗೆ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಕಳವಳ ವ್ಯಕ್ತಪಡಿಸಿದ್ದವು.
ಅತೀಕ್ ಅಹಮ್ಮದ್ ಸದ್ಯ ಗುಜರಾತ್‌ನ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.