ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಓಣಂ ಲಾಟರಿ: ಆಟೊ ಚಾಲಕನಿಗೆ ಒಲಿದ ₹ 25 ಕೋಟಿ ಬಂಪರ್‌ ಬಹುಮಾನ

Last Updated 18 ಸೆಪ್ಟೆಂಬರ್ 2022, 14:05 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ಸರ್ಕಾರದ ಓಣಂ ಬಂಪರ್‌ ಲಾಟರಿ ಟಿಕೆಟ್‌ ಖರೀದಿಸಿದ್ದ ಇಲ್ಲಿನ ಆಟೊ ಚಾಲಕ ಅನೂಪ್‌ ಅವರಿಗೆ ಪ್ರಥಮ ಬಹುಮಾನ ₹ 25 ಕೋಟಿ ಲಭಿಸಿದೆ.

ಶನಿವಾರ ಅವರು ಲಾಟರಿ ಟಿಕೆಟ್‌ (ಟಿಜೆ750605) ಖರೀದಿಸಿದ್ದರು. ತೆರಿಗೆ ಹಾಗೂ ಕಮಿಷನ್‌ ಕಳೆದು ಅವರಿಗೆ ₹ 15.75 ಕೋಟಿ ಸಿಗಲಿದೆ.

ಈ ಬಂಪರ್‌ ಬಹುಮಾನ ತಂದಿರುವ ಟಿಕೆಟ್ಅನ್ನು ಮಾರಾಟ ಮಾಡಿರುವ ತಿರುವನಂತಪುರದ ಭಗವತಿ ಏಜೆನ್ಸಿಗೆ ಕಮಿಷನ್‌ ರೂಪದಲ್ಲಿ ₹ 2.5 ಕೋಟಿ ಸಿಗಲಿದೆ.

ಅನೂಪ್‌ ಅವರು ಆಟೊ ಚಾಲಕರಾಗಿರುವ ಜೊತೆಗೆ ಬಾಣಸಿಗರೂ ಹೌದು. ಬಾಣಸಿಗನಾಗಿ ಒಳ್ಳೆಯ ಉದ್ಯೋಗ ಅರಸಿ ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದರು. ಬೃಹತ್‌ ಮೊತ್ತದ ಲಾಟರಿ ಬಹುಮಾನ ಸಿಕ್ಕಿರುವ ಕಾರಣ ವಿದೇಶಕ್ಕೆ ಹಾರುವ ಯೋಚನೆಯನ್ನು ಕೈಬಿಟ್ಟಿದ್ದಾರೆ.

ಈ ವರ್ಷವಷ್ಟೇ ಓಣಂ ಲಾಟರಿಯ ಬಂಪರ್‌ ಬಹುಮಾನದ ಮೊತ್ತವನ್ನು ₹ 25 ಕೋಟಿಗೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್‌ ದರ ₹ 500 ಇದ್ದು, ದಾಖಲೆಯ 66.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು.

ಕಳೆದ ವರ್ಷದ ಓಣಂ ಬಂಪರ್‌ ಲಾಟರಿಯ ಬಹುಮಾನದ ಮೊತ್ತ ₹ 12 ಕೋಟಿ ಇತ್ತು. ಆ ಬಹುಮಾನ ಸಹ ಕೊಚ್ಚಿಯ ಆಟೊ ಚಾಲಕ ಜಯಪಾಲನ್‌ ಎಂಬುವವರ ಪಾಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT