ಸೋಮವಾರ, ಆಗಸ್ಟ್ 8, 2022
21 °C

ಭ್ರಷ್ಟಾಚಾರ ಪ್ರಸ್ತಾಪ | ಬಿಜೆಪಿ ಬೆಂಬಲಿಗರಿಂದ ಮನೆ ಮೇಲೆ ದಾಳಿ: ಎಎಪಿ ಸಂಸದ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಯೋಧ್ಯೆಯಲ್ಲಿ ಭೂಮಿ ಖರೀದಿ ಸಂಬಂಧ ರಾಮಮಂದಿರ ಟ್ರಸ್ಟ್‌ ಭ್ರಷ್ಟಾಚಾರ ನಡೆಸಿದ್ದನ್ನು ಪ್ರಸ್ತಾಪಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ತಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆಮ್‌ ಅದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್‌ ಸಿಂಗ್ ಅವರು ಆರೋಪಿಸಿದ್ದಾರೆ.

ಎಎಪಿ ಮೂಲದ ಪ್ರಕಾರ, ಬಿಗಿ ಭದ್ರತೆಯಿರುವ ನಾರ್ತ್ ಅವಿನ್ಯೂವಿನಲ್ಲಿನ ನಿವಾಸದ ಬಳಿ ಹಾಕಿದ್ದ ನಾಮಫಲಕಕ್ಕೆ ಇಬ್ಬರು ಮಸಿ ಬಳಿದಿದ್ದು ಬಲವಂತವಾಗಿ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಯಾರೊಬ್ಬರಿಗೂ ಪೆಟ್ಟಾಗಿಲ್ಲ.

ಈ ಕುರಿತು ಟ್ವೀಟ್‌ ಮಾಡಿರುವ ಸಿಂಗ್, ‘ಬಿಜೆಪಿ ಬೆಂಬಲಿಗರೇ ಕೇಳಿಸಿಕೊಳ್ಳಿ. ನೀವು ಎಷ್ಟೇ ದಬ್ಬಾಳಿಕೆ ನಡೆಸಿದರೂ ನಾನು ರಾಮ ಮಂದಿರಕ್ಕಾಗಿ ಸಂಗ್ರಹವಾದ ಹಣ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು