ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮಮಂದಿರದ ಕಾವಲುಗಾರನ ಮೇಲೆ ನೀಲ್‌ಗಾಯ್ ದಾಳಿ!

Last Updated 16 ಜನವರಿ 2023, 15:40 IST
ಅಕ್ಷರ ಗಾತ್ರ

ಅಯೋಧ್ಯೆ (ಉತ್ತರಪ್ರದೇಶ): ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಸ್ಥಳದಲ್ಲಿ ಕಾವಲುಗಾರರೊಬ್ಬರು ನೀಲ್‌ಗಾಯ್ ಆಕ್ರಮಣದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪ್ರಾಂತೀಯ ಸಶಸ್ತ್ರ ಪಡೆಯ 32ನೇ ಬೆಟಾಲಿಯನ್‌ನ ಕಮಾಂಡೊ ಮೊಹಮ್ಮದ್ ಹನೀಫ್ ಎಂಬುವರ ಮೇಲೆ ಭಾನುವಾರ ನೀಲಗಾಯ್ ದಾಳಿ ನಡೆಸಿದೆ. ನೀಲ್‌ಗಾಯ್‌ನಿಂದ ತಪ್ಪಿಸಿಕೊಳ್ಳಲು ಹನೀಫ್ ಅವರು ಕನಿಷ್ಠ 10 ನಿಮಿಷಗಳ ಕಾಲ ಹೋರಾಡಿದರು. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಫೈಜಾಬಾದ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

100 ಎಕರೆಗೂ ಹೆಚ್ಚಿರುವ ರಾಮಜನ್ಮಭೂಮಿಯ ಆವರಣದಲ್ಲಿ ಈ ಹಿಂದೆಯೂ ನೀಲ್‌ಗಾಯ್‌ಗಳು ಕಾಣಿಸಿಕೊಂಡಿದ್ದವು.

ನೀಲ್‌ಗಾಯ್‌ಗಳು ಸಹಜವಾಗಿ ಸೌಮ್ಯ ಪ್ರಾಣಿಗಳು. ಆದರೆ, ಹೆದರಿಕೆ ಆದಾಗ ಬೆದರಿ ಇತರೆ ಪ್ರಾಣಿ, ಮಾನವರ ಮೇಲೆ ದಾಳಿ ಮಾಡಬಹುದು. ಅಯೋಧ್ಯೆಯ ಕಾವಲುಗಾರನ ಮೇಲೆ ನೀಲ್‌ಗಾಯ್ ದಾಳಿ ಮಾಡಿರುವುದು ಹಲವರಿಗೆ ಆಶ್ಚರ್ಯ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT