ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಶ್ಮೀರದಲ್ಲಿ ಹೆಚ್ಚಿದ ಭದ್ರತೆ: ರಾಜೌರಿ ಜಿಲ್ಲೆಯಲ್ಲಿ ಡ್ರೋನ್‌ ಬಳಕೆಗೆ ನಿಷೇಧ

ಸಂಗ್ರಹ, ಮಾರಾಟ, ಬಳಕೆ, ಸಾಗಣೆಗೆ ನಿರ್ಬಂಧ
Last Updated 30 ಜೂನ್ 2021, 11:48 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಡ್ರೋನ್‌ಗಳ ಸಂಗ್ರಹ, ಮಾರಾಟ, ಬಳಕೆ ಮತ್ತು ಸಾಗಣೆಯನ್ನು ನಿಷೇಧಿಸಲಾಗಿದೆ.

ಜಮ್ಮು ವಾಯು ಪಡೆ ನೆಲೆ ಮೇಲೆ ಬಾಂಬ್‌ ದಾಳಿ ಪ್ರಕರಣದ ಬಳಿಕ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಜಿಲ್ಲಾಧಿಕಾರಿ ರಾಜೇಶ್‌ ಕುಮಾರ್‌ ಶವಾನ್‌ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಡ್ರೋನ್‌ ಅಥವಾ ಡ್ರೋನ್‌ ರೀತಿಯ ವಸ್ತುಗಳನ್ನು ನಾಗರಿಕರು ಹೊಂದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಗೆ ನೀಡಬೇಕು ಎಂದು ಸೂಚಿಸಿದ್ದಾರೆ.

ಆದರೆ, ನಕಾಶೆ, ಸಮೀಕ್ಷೆ ಮತ್ತು ನಿಗಾವಹಿಸುವ ಉದ್ದೇಶದಿಂದ ಸರ್ಕಾರಿ ಸಂಸ್ಥೆಗಳು ಡ್ರೋನ್‌ಗಳನ್ನು ಬಳಸುವುದಾದರೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಡ್ರೋನ್‌ ಕ್ಯಾಮೆರಾಗಳು ಮತ್ತು ಹಾರಾಟ ಮಾಡುವ ಗೊಂಬೆಗಳನ್ನು ಸಹ ನಾಗರಿಕರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿಟ್ಟು ರಶೀದಿ ಪಡೆಯಬೇಕು ಎಂದು ಸೂಚಿಸಿದ್ದಾರೆ

‘ಕೆಲವು ರಾಷ್ಟ್ರ ವಿರೋಧಿ ಶಕ್ತಿಗಳು ಡ್ರೋನ್‌ ಮತ್ತು ಹಾರಾಟದ ವಸ್ತುಗಳನ್ನು ಬಳಸಿ ವಿಧ್ವಂಸಕ ಕೃತ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗಾಗಿ, ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT