ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ–305 ಬಾರ್ಜ್‌ ದುರಂತ: ಕ್ಯಾಪ್ಟನ್‌, ಇತರರ ವಿರುದ್ಧ ಎಫ್‌ಐಆರ್‌

Last Updated 21 ಮೇ 2021, 7:53 IST
ಅಕ್ಷರ ಗಾತ್ರ

ಮುಂಬೈ: ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾದ ಪಿ–305 ಬಾರ್ಜ್‌ನ ಕ್ಯಾಪ್ಟನ್‌ ಮತ್ತು ಇತರ ಕೆಲವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

‘ಈ ಸಂಬಂಧ ಬಾರ್ಜ್‌ನ ಮುಖ್ಯ ಎಂಜಿನಿಯರ್‌ ರಹಮನ್‌ ಹುಸೈನ್‌ ಅವರು ಯೆಲ್ಲೋ ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಆಧಾರದ ಮೇಲೆ ಕ್ಯಾಪ್ಟ್‌ನ್‌ ರಾಕೇಶ್‌ ಬಳ್ಳ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

‘ಕಳೆದ ಐದು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾದ ಪಿ–305 ಬಾರ್ಜ್‌ನಲ್ಲಿ 261 ಸಿಬ್ಬಂದಿ ಇದ್ದರು. ಗುರುವಾರದವರೆಗೆ 186 ಮಂದಿಯನ್ನು ರಕ್ಷಿಸಲಾಗಿದ್ದು, 49 ಮಂದಿ ಮೃತಪಟ್ಟಿದ್ಧಾರೆ. ಆ್ಯಂಕರ್‌ ನಿರ್ವಹಣೆಯ ಬೋಟ್‌ ವರಪ್ರದಾದಿಂದ ನಾಪತ್ತೆಯಾಗಿರುವ 11 ಮಂದಿ ಮತ್ತು ಬಾರ್ಜ್‌ನಿಂದ ನಾಪತ್ತೆಯಾಗಿರುವ 26 ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT