ಶಿಕ್ಷೆ ಸ್ವರೂಪ ಬದಲು: 26ರ ಒಳಗೆ ತೀರ್ಮಾನಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ, ಮರಣದಂಡನೆ ಶಿಕ್ಷೆಯನ್ನು ಪರಿವರ್ತಿಸಲು ಕೋರಿರುವ ಬಲ್ವಂತ್ ಎಸ್. ರಾಜೋನಾ ಅವರ ಅರ್ಜಿ ಕುರಿತಂತೆ ಜನವರಿ 26ರೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರಕ್ಕೆ ಸೂಚಿಸಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು, ‘ಗಣರಾಜ್ಯೋತ್ಸವ ದಿನಕ್ಕಿಂತಲೂ ಮೊದಲೇ ತೀರ್ಮಾನ ಕೈಗೊಗೊಳ್ಳಬೇಕು. ಅದು ಒಳ್ಳೆಯ ದಿನ. 2–3 ವಾರ ಸಮಯ ನೀಡುತ್ತೇವೆ. ಅಷ್ಟರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ, ತೀರ್ಮಾನವನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ಮಾಡಿತು.
ಚಂಡೀಗಡದಲ್ಲಿ 1995ರಲ್ಲಿ ನಾಗರಿಕ ಸಚಿವಾಲಯ ಕಚೇರಿ ಬಳಿ ನಡೆದಿದ್ದ ಸ್ಪೋಟದಲ್ಲಿ ಬಿಯಾಂತ್ ಸಿಂಗ್ ಮತ್ತು 16 ಜನರು ಮೃತಪಟ್ಟಿದ್ದರು. ವಿಶೇಷ ನ್ಯಾಯಾಲಯವು 2007ರಲ್ಲಿ ರಾಜೋನಾಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.