ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ವಾಹನಕ್ಕೂ ಬಿಎಚ್‌ ನೋಂದಣಿಗೆ ಅವಕಾಶ

Last Updated 16 ಡಿಸೆಂಬರ್ 2022, 19:26 IST
ಅಕ್ಷರ ಗಾತ್ರ

ನವದೆಹಲಿ: ಸಾಮಾನ್ಯ ನೋಂದಣಿ ಸಂಖ್ಯೆ ಹೊಂದಿರುವ ಹಳೆಯ ವಾಹನಗಳನ್ನೂ ಭಾರತ್‌ ಸರಣಿಗೆ (ಬಿಎಚ್‌–ಸಿರೀಸ್‌) ಪರಿವರ್ತಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅವಕಾಶ ಕಲ್ಪಿಸಿದೆ.

ದೇಶದಲ್ಲಿ ಬಿಎಚ್‌-ಸಿರೀಸ್‌ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಭಾಗವಾಗಿ ಸಚಿವಾಲಯವು ಈ ಕ್ರಮ ತೆಗೆದುಕೊಂಡಿದೆ. ಈ ಮೊದಲು ಹೊಸ ವಾಹನಗಳಿಗೆ ಮಾತ್ರವೇ ಬಿಎಚ್‌–ಸಿರೀಸ್‌ ನೋಂದಣಿ ವ್ಯವಸ್ಥೆ ನೀಡಿಲಾಗಿತ್ತು.

ವಸತಿ ವಿಳಾಸ ಅಥವಾ ಕೆಲಸ ಮಾಡುವ ವಿಳಾಸ ಎರಡರಿಂದಲೂ ಅರ್ಜಿ ಸಲ್ಲಿಸಲು ಅನುಕೂಲ ಆಗುವಂತೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸಚಿವಾಲಯ ಮುಂದಾಗಿದೆ.

ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಅಲ್ಲಿ ಮರು ನೋಂದಣಿ ಮಾಡುವುದನ್ನು ತಪ್ಪಿಸಲುಕೇಂದ್ರ ಮೋಟಾರು ವಾಹನಗಳ (12ನೇ ತಿದ್ದುಪಡಿ) ನಿಯಮವು 2021ರ ಸೆಪ್ಟೆಂಬರ್‌ 15ರಿಂದ ಜಾರಿಗೆ ಬಂದಿದೆ.

ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಾಗೂ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಸ್ವಯಂ ಪ್ರೇರಿತವಾಗಿ ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಈಚಿನ ಮಾಹಿತಿಯ ಪ್ರಕಾರ, ಭಾರತ್ ಸರಣಿಯ ಅಡಿಯಲ್ಲಿ 49,600 ವಾಹನಗಳು ನೋಂದಾಯಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT