ನವದೆಹಲಿ: ತೇಜಸ್ ವಿಮಾನಕ್ಕಾಗಿ ಸಮಗ್ರ ಉಷ್ಣ ವಿನಿಮಯ ಘಟಕಗಳನ್ನು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಗೆ, ಕೇಂದ್ರ ಸರ್ಕಾರದ ಅಧೀನದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಸಂಸ್ಥೆಯು ಪೂರೈಸಲಿದೆ.
ಹಗುರ ಯುದ್ಧವಿಮಾನ ‘ತೇಜಸ್ ಎಂ.ಕೆ 1ಎ’ಯ 83 ವಿಮಾನಗಳಿಗೆ ಇಂತಹ ಘಟಕಗಳನ್ನು ಬಿಎಚ್‌ಇಎಲ್ ಪೂರೈಸಲಿದೆ ಎಂದು ಸಂಸ್ಥೆಯ ಹೇಳಿಕೆಯು ತಿಳಿಸಿದೆ. ಉತ್ಪಾದನೆ, ಜೋಡಣೆ, ಪರೀಕ್ಷೆ ಮತ್ತು ಉಷ್ಣ ವಿನಿಮಯ ಘಟಕಗಳ ಪೂರೈಕೆಯನ್ನು ಸಂಸ್ಥೆ ನಿಭಾಯಿಸಲಿದೆ.
ಎಲ್‌ಸಿಎ ತೇಜಸ್‌ಗಾಗಿ ಎಚ್ಎಎಲ್ ಸಂಸ್ಥೆಗೆ ಬಿಎಚ್ಇಎಲ್‌ನ ವಿಶಾಖಪಟ್ಟಣದ ಘಟಕವು 1996ರಿಂದಲೂ ಹೆವಿ ಪ್ಲೇಟ್ಸ್ ಮತ್ತು ವೆಸೆಲ್ಸ್ ಪ್ಲಾಂಟ್ ಅನ್ನು ಪೂರೈಸುತ್ತಿದೆ ಎಂದು ಹೇಳಿಕೆಯು ವಿವರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.