ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ದೊಡ್ಡ ಪ್ರಮಾಣದಲ್ಲಿ ಫಿರಂಗಿ ಗುಂಡುಗಳು ಪತ್ತೆ

Last Updated 5 ಫೆಬ್ರುವರಿ 2021, 13:08 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪವನಗಡ್‌ ಕೋಟೆ ಪ್ರದೇಶದಲ್ಲಿ ಫಿರಂಗಿಗೆ ಬಳಸುವ ಸುಮಾರು 450 ರಿಂದ 500ರಷ್ಟು ಗುಂಡುಗಳು ಪತ್ತೆಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ದೊರಕಿರುವ ಅತಿ ದೊಡ್ಡ ಶೋಧ ಕಾರ್ಯ ಇದಾಗಿದೆ.

ಪವನಗಡ್ ಕೋಟೆಯು 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿತ್ತು. ಬೆಟ್ಟಭಾಗದಲ್ಲಿ ಇರುವ ಈ ಕೋಟೆಯ ಮಧ್ಯೆ ಕಂದಕ ಹಾದುಹೋಗಲಿದೆ.

ಗುರುವಾರ ‘ಟೀಂ ಪವನಗಡ್’ ತಂಡವು ಸೂಚನಾ ಫಲಕ ಅಳವಡಿಸಲು ಹಳ್ಳ ತೋಡುವಾಗಗ ಕೆಲವೊಂದು ಗುಂಡು ಕಂಡುಬಂದವು. ಬಳಿಕ ವ್ಯವಸ್ಥಿತವಾಗಿ ಹಳ್ಳ ತೋಡಿದ್ದು, ದೊಡ್ಡ ಪ್ರಮಾಣದಲ್ಲಿ ಗುಂಡುಗಳು ಇರುವುದನ್ನು ಗುರುತಿಸಲಾಯಿತು.

‌ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯ, ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮತ್ತು ಪರಿಣತರು ಸ್ಥಳ ಮತ್ತು ದೊರೆತಿರುವ ಗುಂಡುಗಳ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT