ಗುರುವಾರ , ಮೇ 6, 2021
25 °C

ಕೋವಿಡ್‌: ಬಿಹಾರದಲ್ಲಿ ರಾತ್ರಿ ಕರ್ಫ್ಯೂ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಾಟ್ನಾ: ಕೋವಿಡ್‌ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಈ ವಿಷಯ ಪ್ರಕಟಿಸಿದರು.

ರಾಜ್ಯದಾದ್ಯಂತ ಶಾಲೆ, ಕಾಲೇಜು, ಕೋಚಿಂಗ್‌ ಕೇಂದ್ರಗಳು ಹಾಗೂ ಧಾರ್ಮಿಕ, ಪೂಜಾ ಸ್ಥಳಗಳನ್ನು ಮೇ 15ರವರೆಗೆ ಮುಚ್ಚಲು ಆದೇಶಿಸಿದೆ. ಸರ್ಕಾರಿ ಕಚೇರಿಗಳು ಮೂರನೇ ಒಂದರಷ್ಟು ಸಿಬ್ಬಂದಿ ಸಾಮರ್ಥದಲ್ಲಿ ಸಂಜೆ 5ರವರೆಗೆ  ಕಾರ್ಯನಿರ್ವಹಿಸಲಿವೆ. ಶಾಪ್‌ಗಳು, ಮಂಡಿ, ವಾಣಿಜ್ಯ ಚಟುವಟಿಕೆಗಳು ಸಂಜೆ 6ಕ್ಕೆ ಮುಚ್ಚಲಿವೆ.

ಮದುವೆ ಕಾರ್ಯಕ್ರಮಗಳಿಗೆ ಹಾಜರಿ ಮಿತಿಯನ್ನು 100 ಜನರಿಗೆ, ಅಂತ್ಯಕ್ರಿಯೆಗಳಿಗೆ ಹಾಜರಿ ಮಿತಿಯನ್ನು 25 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ವಪಕ್ಷಗಳ ಮುಖಂಡರ ಸಭೆಯ ನಂತರ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು