ಭಾನುವಾರ, ಜೂನ್ 26, 2022
23 °C

ಬಿಹಾರದಲ್ಲಿ ಶೀಘ್ರವೇ ಜಾತಿ ಆಧಾರಿತ ಸಮೀಕ್ಷೆ ಪ್ರಕ್ರಿಯೆ: ನಿತೀಶ್ ಕುಮಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ರಾಜ್ಯದಲ್ಲಿನ ಸರ್ವಪಕ್ಷಗಳ ಅಭಿಪ್ರಾಯ ಪಡೆದ ಬಳಿಕ ‘ಜಾತಿ’ ಸಮೀಕ್ಷೆ ಕಾರ್ಯವನ್ನು ತಮ್ಮ ಸರ್ಕಾರ ಶೀಘ್ರವೇ ಕೈಗೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ. 

ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಮೇ 27ರಂದು ಸರ್ವಪಕ್ಷಗಳ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. 

ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕ್ರೋಡೀಕರಿಸುತ್ತೇವೆ. ಬಳಿಕ ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸಂಪುಟದ ಮುಂದಿಡಲಾಗುತ್ತದೆ. ಮೇ 27ರಂದು ಉದ್ದೇಶಿಸಿರುವ ಸರ್ವಪಕ್ಷಗಳ ಸಭೆಗೆ ಕೆಲವು ಪಕ್ಷಗಳು ಸಮ್ಮತಿಸಿವೆ. ಕೆಲವು ಪಕ್ಷಗಳು ಇನ್ನಷ್ಟೇ ಉತ್ತರ ನೀಡಬೇಕಿದೆ. ಈ ಕುರಿತ ಪ್ರಸ್ತಾವನೆಯನ್ನು ಸಂಪುಟದ ಮುಂದಿಟ್ಟ ಬಳಿಕ, ಜಾತಿ ಆಧಾರಿತ ಸಮೀಕ್ಷೆ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು. 

ಆದರೆ, ನಿತೀಶ್ ಕುಮಾರ್ ಅವರ ಈ ಪ್ರಸ್ತಾವನೆಗೆ ಮೈತ್ರಿ ಭಾಗವಾಗಿರುವ ಬಿಜೆಪಿಯ ಬೆಂಬಲವಿದೆಯೇ ಎಂಬುದು ಖಚಿತವಾಗಿಲ್ಲ. ಯಾಕೆಂದರೆ, ಜಾತಿ ಆಧಾರಿತ ಸಮೀಕ್ಷೆಯು ಒಡಕು ಉಂಟು ಮಾಡುವ ಪ್ರವೃತ್ತಿ ಎಂದು ಕೇಂದ್ರ ಸರ್ಕಾರದ ಪ್ರತಿಪಾದನೆಯಾಗಿದೆ. ಆದರೆ, ನಿರ್ಲಕ್ಷಿತ ಸಮುದಾಯಗಳಿಗೆ ಉತ್ತಮ ಯೋಜನೆ ರೂಪಿಸಲು ಜಾತಿ ಆಧಾರಿತ ಸಮೀಕ್ಷೆ ಪೂರಕವಾಗಲಿದೆ ಎಂಬುದು ಬಿಹಾರದ ಪಕ್ಷಗಳ ವಾದ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು