ಶುಕ್ರವಾರ, ಮೇ 7, 2021
26 °C

ಭಾರತಕ್ಕೆ ನೆರವಿನ ಹಸ್ತ ಚಾಚಿದ ಭಾರತೀಯ ಅಮೆರಿಕನ್‌ ಉದ್ಯಮಿ ವಿನೋದ್‌ ಖೋಸ್ಲಾ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಭಾರತೀಯ ಅಮೆರಿಕನ್‌ ಉದ್ಯಮಿ ವಿನೋದ್‌ ಖೋಸ್ಲಾ ಅವರು ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ‍ಪೂರೈಸಲು ₹74 ಕೋಟಿ (10 ಮಿಲಿಯನ್‌ ಡಾಲರ್‌) ನೀಡುವುದಾಗಿ ಭರವಸೆ ನೀಡಿದ್ದಾರೆ.

ವಿನೋದ್‌ ಖೋಸ್ಲಾ ಅವರು ಸನ್‌ ಮೈಕ್ರೋಸಿಸ್ಟಂನ ಸಹ ಸಂಸ್ಥಾಪಕರಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ ನಾವು ಜೀವಗಳನ್ನು ಉಳಿಸಬೇಕಾಗಿದೆ. ಇದರಲ್ಲಿ ಸ್ವಲ್ಪವೂ ತಡವಾದರೆ ಇನ್ನಷ್ಟು ಮಂದಿ ಸಾವಿಗೀಡಾಗಬಹುದು. ಭಾರತದ ಹಲವು ಆಸ್ಪತ್ರೆಗಳು, ಸರ್ಕಾರೇತರ ಸಂಸ್ಥೆಗಳು ಪ್ರತಿನಿತ್ಯ  20,000 ಆಮ್ಲಜನಕ ಪೂರೈಕೆ ಪರಿಕರ, 15,000 ಆಮ್ಲಜನಕ ಸಿಲಿಂಡರ್‌ಗಳು, 500 ಐಸಿಯು ಹಾಸಿಗೆಗಳು, 100 ವೆಂಟಿಲೇಟರ್‌ಗಳು, ಕೋವಿಡ್‌ ಕೇಂದ್ರಗಳಿಗೆ 10,000 ಹಾಸಿಗೆಗಳನ್ನು ಪೂರೈಸುವಂತೆ ಮನವಿ ಮಾಡುತ್ತಿವೆ. ನಾವು ಭಾರತಕ್ಕೆ ಇನ್ನಷ್ಟು ಸಹಾಯ ಮಾಡಬೇಕು’ ಎಂದಿದ್ದಾರೆ.

‘ಭಾರತದ ತುರ್ತು ಅಗತ್ಯತೆಗಾಗಿ ಖೋಸ್ಲಾ ಕುಟುಂಬವು @GiveIndiaಗೆ ₹74 ಕೋಟಿ (10 ಮಿಲಿಯನ್‌ ಡಾಲರ್‌) ಅನ್ನು ನೀಡಲಿದೆ’ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು