ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರವು ಒಪ್ಪಂದದ ವ್ಯಾಪ್ತಿ ಮೀರಿ ವಿದ್ಯುತ್ ಯೋಜನೆಯಲ್ಲಿ ಖಾಸಗಿ ಕಂಪನಿಗೆ ₹ 396 ಕೋಟಿ ಹೆಚ್ಚುವರಿ ಹಣ ಪಾವತಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಹಿಮಾಚಲ ಪ್ರದೇಶ ಕಾಂಗ್ರೆಸ್ ‘ಚಾರ್ಜ್ಶೀಟ್’ ಸಮಿತಿ ಅಧ್ಯಕ್ಷ ರಾಜೇಶ್ ಧರ್ಮನಿ, ‘ಇದು ಸೇರಿದಂತೆ ಹಲವು ಹಣಕಾಸು ಅಕ್ರಮಗಳನ್ನು ಸೆಪ್ಟೆಂಬರ್ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹೊರಡಿಸುವ‘ಚಾರ್ಜ್ಶೀಟ್’ನಲ್ಲಿ ಸೇರಿಸಲಾಗುವುದು’ ಎಂದರು. ಈ ವರ್ಷದ ಅಂತ್ಯದಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಖಾಸಗಿ ಕಂಪನಿಗೆ ಹೆಚ್ಚುವರಿ ಹಣ ಪಾವತಿ ಕುರಿತು ವಿವರ ನೀಡಲು ನಿರಾಕರಿಸಿದ ಧರ್ಮನಿ, ಮುಂದಿನ ಎರಡು ತಿಂಗಳಲ್ಲಿ ಹೊರಡಿಸುವ ಚಾರ್ಜ್ಶೀಟ್ನಲ್ಲಿ ವಿವರಗಳನ್ನು ಸೇರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.