ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ವಿಧಾನಸಭೆ ಚುನಾವಣೆ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ರ‍್ಯಾಲಿ ಸೋಮವಾರ

Last Updated 21 ಮಾರ್ಚ್ 2021, 14:36 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಸ್ಸಾಂನ ಪ್ರಮುಖ ಮೂರು ನಗರಗಳಲ್ಲಿ ಸೋಮವಾರ ರ‍್ಯಾಲಿ ನಡೆಸಲಿದ್ದಾರೆ. ದಿಬ್ರೂಗರ್‌,ಜೋರ್ಹತ್ಮತ್ತು ಬಿಸ್ವನಾಥ್‌ ಚರಲಿಯಲ್ಲಿ ನಡೆಯುವರ‍್ಯಾಲಿಗಳಲ್ಲಿಅವರು ಭಾಗವಹಿಸಲಿದ್ದಾರೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮಾರ್ಚ್‌ 27 ರಿಂದ ಏಪ್ರಿಲ್‌ 6ರ ವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.

ಗೋಲಘಾಟ್‌ನಲ್ಲಿ ಇಂದು (ಭಾನುವಾರ) ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಸ್ಸಾಂನಲ್ಲಿ ʼಇನ್ನೊಮ್ಮೆ ಬಿಜೆಪಿ ಸರ್ಕಾರʼ ಎಂದು ನಿರ್ಧರವಾಗಿದೆ. ಮಾತ್ರವಲ್ಲದೆ, ರಾಜ್ಯವು ಎರಡನೇ ಬಾರಿಗೆ ʼಡಬಲ್‌ ಎಂಜಿನ್‌ʼ (ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಎನ್‌ಡಿಎ) ಸರ್ಕಾರಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.

2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಾದ ಅಸ್ಸಾಂ ಗಣ ಪರಿಷತ್‌ (ಎಜಿಪಿ) ಮತ್ತು ಬೊಡೊಲ್ಯಾಂಡ್‌ ಪೀಪಲ್ಸ್‌ ಪ್ರಂಟ್‌ (ಬಿಪಿಎಫ್‌) ಒಟ್ಟ 86ಸ್ಥಾನಗಳನ್ನು ಗೆದ್ದುಕೊಂಡಿದ್ದವು. 58 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಯು ರಾಜ್ಯದಲ್ಲಿ ಮೊದಲ ಸಲ ಅಧಿಕಾರಕ್ಕೇರಿತ್ತು. ಇದರೊಂದಿಗೆ ಕಾಂಗ್ರೆಸ್‌ನ 15 ವರ್ಷಗಳ ಆಡಳಿತವು ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT