ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ: ರಾಜ್ಯಕ್ಕೆ ಹೆಚ್ಚುವರಿಯಾಗಿ 18,130 ವಯಲ್ಸ್ ಆ್ಯಂಪೊಟೆರಿಸಿನ್‌

ಟ್ವಿಟರ್‌ನಲ್ಲಿ ಡಿ.ವಿ.ಸದಾನಂದ ಗೌಡ ಮಾಹಿತಿ
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕಕ್ಕೆ ಹೆಚ್ಚುವರಿಯಾಗಿ 18,130 ವಯಲ್ಸ್‌ ಲಿಪೊಸೊಮಲ್‌ ಆ್ಯಂಪೊಟೆರಿಸಿನ್‌-ಬಿ ಚುಚ್ಚುಮದ್ದು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೋಮವಾರ ತಿಳಿಸಿದ್ದಾರೆ.

ಈ ಕುರಿತು ಟ್ವೀಟಿಸಿರುವ ಅವರು, ಈವರೆಗೂ ಕರ್ನಾಟಕಕ್ಕೆ 75,990 ವಯಲ್ಸ್‌ ಆ್ಯಂಪೊಟೆರಿಸಿನ್‌ ಔಷಧಿ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ. ಮೂಗು, ಕಣ್ಣು, ಕೆಲವೊಮ್ಮೆ ಮೆದುಳಿಗೆ ಹಾನಿ ಮಾಡುವ ಮ್ಯೂಕರ್‌ಮೈಕೊಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸೆಗೆ ಆ್ಯಂಪೊಟೆರಿಸಿನ್‌ ಬಳಸಲಾಗುತ್ತದೆ.

ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೆಚ್ಚುವರಿಯಾಗಿ 2,12,540 ವಯಲ್ಸ್‌ ಆ್ಯಂಪೊಟೆರಿಸಿನ್‌ ಚುಚ್ಚುಮದ್ದು ಹಂಚಿಕೆ ಮಾಡಲಾಗಿದೆ. ಈತನಕ ದೇಶದಾದ್ಯಂತ ಅಂದಾಜು 10 ಲಕ್ಷ ವಯಲ್ಸ್‌ ಔಷಧಿ ಹಂಚಿಕೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT