ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್‌ ಆಸ್ಪತ್ರೆಯ ಶೇ.15 ರಷ್ಟು ರೋಗಿಗಳ ಮಿದುಳಲ್ಲಿ ಕಪ್ಪು ಶಿಲೀಂಧ್ರ ಪತ್ತೆ

Last Updated 31 ಮೇ 2021, 13:46 IST
ಅಕ್ಷರ ಗಾತ್ರ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ಸರ್ಕಾರಿ ಮಹಾರಾಜ ಯಶ್ವಂತರಾವ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನ ಚಿಕಿತ್ಸೆಗೆ ದಾಖಲಾದ ಕನಿಷ್ಠ ಶೇ. 15 ರಷ್ಟು ರೋಗಿಗಳ ಮಿದುಳಲ್ಲಿ ಮ್ಯೂಕರ್ ಮೈಕೊಸಿಸ್ ಅಥವಾ ಕಪ್ಪು ಶಿಲೀಂಧ್ರ ಪತ್ತೆಯಾಗಿದೆ ಎಂದು ಹಿರಿಯ ವೈದ್ಯರು ಸೋಮವಾರ ತಿಳಿಸಿದ್ದಾರೆ.

ಎಂವೈಹೆಚ್‌ ಆಸ್ಪತ್ರೆಗೆ ದಾಖಲಾದ 368 ಮ್ಯೂಕರ್ ಮೈಕೊಸಿಸ್ ರೋಗಿಗಳಲ್ಲಿ, 55 ಮಂದಿಗೆ ಅವರ ಮಿದುಳಲ್ಲಿ ಸೋಂಕು ಇದೆ ಎಂಬುದು ಪ್ರಾಥಮಿಕ ಅಧ್ಯಯನವು ತೋರಿಸಿದೆ ಮತ್ತು ಇದನ್ನು ಸಿಟಿ (ಕಂಪ್ಯೂಟರೀಕೃತ ಟೊಮೊಗ್ರಫಿ) ಮತ್ತು ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಸ್ಕ್ಯಾನ್‌ಗಳು ದೃಢಪಡಿಸಿವೆ ಎಂದು ನ್ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಕೇಶ್ ಗುಪ್ತಾ ಹೇಳಿದ್ದಾರೆ.

ಈ ರೋಗಿಗಳಲ್ಲಿ ಹೆಚ್ಚಿನವರು ತಮ್ಮ ಮಿದುಳಲ್ಲಿ ‘ಸಣ್ಣ ಗಾತ್ರದ’ ಸೋಂಕು ಹೊಂದಿದ್ದರೆ, ನಾಲ್ವರು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಪ್ರಮುಖ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಡಾ ಗುಪ್ತಾ ಹೇಳಿದರು.

ಆಸ್ಪತ್ರೆಗೆ ದಾಖಲಾಗುವ ಮೊದಲು ಸೋಂಕು ಸೈನಸ್ ಮೂಲಕ ಈ ರೋಗಿಗಳ ಮಿದುಳಿಗೆ ತಲುಪಿದೆ ಎಂದು ಅವರು ಹೇಳಿದರು.

ಮಿದುಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿನ ಆರಂಭಿಕ ಲಕ್ಷಣಗಳೆಂದರೆ ತಲೆನೋವು ಮತ್ತು ವಾಂತಿ. ಆದರೆ, ಸೋಂಕು ಹರಡುತ್ತಿದ್ದಂತೆ ರೋಗಿ ಪ್ರಜ್ಞೆ ಕಳೆದುಕೊಳ್ಳುತ್ತಾರೆ ಎಂದು ಇತರೆ ತಜ್ಞರು ಅಭಿಪ್ರಾಯಪಟ್ಟಿದ್ದರೆ ಎಂದು ಅವರು ಹೇಳಿದರು.

ಈ ಮಧ್ಯೆ, ಆಂಫೊಟೆರಿಸಿನ್-ಬಿ ಚುಚ್ಚುಮದ್ದಿನ ಕೊರತೆಯು ಕಪ್ಪು ಶಿಲೀಂಧ್ರ ಸೋಂಕನ್ನು ನಿಭಾಯಿಸುವ ಪ್ರಯತ್ನಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಕಪ್ಪು ಶಿಲೀಂಧ್ರ ಸೋಂಕು ಹೆಚ್ಚಾಗಿ ಕೋವಿಡ್-19 ರೋಗಿಗಳಲ್ಲಿ ಮತ್ತು ಅದರಿಂದ ಚೇತರಿಸಿಕೊಂಡವರಲ್ಲಿ ಕಂಡುಬರುತ್ತಿದ್ದರೆ, ಕೊರೊನಾ ಸೋಂಕು ತಗುಲದ ಕೆಲವರಲ್ಲಿ ಮ್ಯೂಕರ್ ಮೈಕೊಸಿಸ್ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT