ಮಂಗಳವಾರ, ಜೂನ್ 28, 2022
25 °C

ಸಣ್ಣ ವ್ಯಾಪಾರಿಗೆ ಸಿಕ್ಕಿತು ಕೋಟಿ ಬೆಲೆಬಾಳುವ 26 ಕ್ಯಾರೆಟ್ ವಜ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಪನ್ನಾ: ಸಣ್ಣ ಪ್ರಮಾಣದ ಇಟ್ಟಿಗೆ ಗೂಡು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ 26.11 ಕ್ಯಾರೆಟ್ ವಜ್ರ ಲಭ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಬೆಲೆಬಾಳುವ ಈ ಹರಳಿಗೆ ಹರಾಜಿನಲ್ಲಿ ₹ 1.20 ಕೋಟಿ ವರೆಗೆ ಸಿಗಬಹುದು ಎಂದು ಪನ್ನಾದ ವಜ್ರ ಅಧಿಕಾರಿ ರವಿ ಪಟೇಲ್ ತಿಳಿಸಿದ್ದಾರೆ.

ಪನ್ನಾ ಪಟ್ಟಣದ ಕಿಶೋರ್‌ಗಂಜ್ ನಿವಾಸಿ ಸುಶೀಲ್ ಶುಕ್ಲಾ ಮತ್ತು ಅವರ ಪಾಲುದಾರರಿಗೆ ಸೋಮವಾರ ಕೃಷ್ಣ ಕಲ್ಯಾಣಪುರ ಪ್ರದೇಶದ ಬಳಿ ಇರುವ ಗಣಿಯಲ್ಲಿ ಬೆಲೆಬಾಳುವ ವಜ್ರವು ದೊರಕಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಒಂದೆರಡು ದಿನಗಳಲ್ಲಿ ಈ ವಜ್ರವನ್ನು ಹರಾಜಿಗೆ ಇಡಲಾಗುವುದು ಮತ್ತು ಇದರಿಂದ ಬರುವ ಆದಾಯದಲ್ಲಿ ಸರ್ಕಾರದ ರಾಯಧನ ಮತ್ತು ತೆರಿಗೆ ಕಡಿತಗೊಳಿಸಿದ ನಂತರ ಗಣಿಗಾರರಿಗೆ ನೀಡಲಾಗುವುದು ಎಂದು ಅವರು ಹೇಳಿದರು.

'ಕಳೆದ 20 ವರ್ಷಗಳಿಂದ ನಾನು ಮತ್ತು ನನ್ನ ಕುಟುಂಬ ವಜ್ರದ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಇದೇ ಮೊದಲ ಬಾರಿಗೆ ಬೆಲೆಬಾಳುವ ವಜ್ರವನ್ನು ಹೊರತೆಗೆಯಲಾಗಿದೆ' ಎಂದು ಶುಕ್ಲಾ ತಿಳಿಸಿದ್ದಾರೆ.

ಕಡಿಮೆ ಆಳವಿರುವ ಗಣಿಯನ್ನು ಇತರೆ ಐವರೊಂದಿಗೆ ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿತ್ತು. ಇಲ್ಲಿ ವಜ್ರ ದೊರಕಿದ್ದು, ಇದರಿಂದ ₹ 1.2 ಕೋಟಿ ಹಣ ದೊರಕಬಹುದು. ಹರಾಜು ಪ್ರಕ್ರಿಯೆಯಿಂದ ಬರುವ ಹಣವನ್ನು ಉದ್ಯಮ ಸ್ಥಾಪನೆಗೆ ಬಳಸಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು