ಶುಕ್ರವಾರ, ಮೇ 20, 2022
25 °C

ಪಾಕಿಸ್ತಾನಿ ನುಸುಳುಕೋರನ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಪಂಜಾಬ್‌ನ ತರ್ನ ತರನ್‌ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನೊಬ್ಬನ‌ನ್ನು ಗಡಿ ಭದ್ರತಾ ಪಡೆಯು ಗುಂಡಿಕ್ಕಿ ಹತ್ಯೆಗೈದಿದೆ.

‘ಶನಿವಾರ ಬೆಳಿಗ್ಗೆ 2.30ರ ಸುಮಾರಿಗೆ ಅಂತರರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದ ಚಟುವಟಿಕೆಗಳನ್ನು ಬಿಎಸ್‌ಎಫ್‌ ಯೋಧರು ಗಮನಿಸಿದರು. ಹೀಗಾಗಿ, ಗುಂಡಿನ ದಾಳಿ ನಡೆಸಿದರು’ ಎಂದು ಹೇಳಿದ್ದಾರೆ.

‘ಘಟನಾ ಸ್ಥಳದಿಂದ 14 ಹೆರಾಯಿನ್‌ ಪ್ಯಾಕೆಟ್‌, ಪಿಸ್ತೂಲ್‌ನ ಆರು ಸುತ್ತಿನ ಗುಂಡುಗಳು, ಎರಡು ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು