ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್‌ಗೆ ನೆರವು: ಉದ್ಯಮಿ ಜೋಶಿ ಸೇರಿ ಮೂವರಿಗೆ 10 ವರ್ಷ ಜೈಲು ಶಿಕ್ಷೆ

Last Updated 9 ಜನವರಿ 2023, 11:13 IST
ಅಕ್ಷರ ಗಾತ್ರ

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮತ್ತು ಸಹಚರರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ನೀಡಿದ ಪ್ರಕರಣದಲ್ಲಿ ಉದ್ಯಮಿ ಜೆ.ಎಂ.ಜೋಶಿ ಮತ್ತು ಇಬ್ಬರಿಗೆ ಇಲ್ಲಿನ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜೋಶಿ, ಜಮೀರುದ್ದೀನ್ ಅನ್ಸಾರಿ ಮತ್ತು ಫಾರುಖ್‌ ಮನ್ಸೂರಿ ಅವರನ್ನು ನ್ಯಾಯಾಲಯ ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿದೆ.

ಏನಿದು ಪ್ರಕರಣ?
ಜೋಶಿ ಮತ್ತು ಆರೋಪಿ ರಸಿಕ್‌ಲಾಲ್‌ ಧಾರಿವಾಲ್ ನಡುವೆ ಹಣಕಾಸು ವಿಚಾರದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಇದನ್ನು ಸರಿಪಡಿಸಲು ಅವರು ಇಬ್ರಾಹಿಂ ನೆರವು ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಕರಾಚಿಯಲ್ಲಿ ಗುಟ್ಕಾ ಘಟಕ ಸ್ಥಾಪನೆಗೆ ನೆರವು ನೀಡುವಂತೆ 2002ರಲ್ಲಿ ಇಬ್ರಾಹಿಂ ಬೇಡಿಕೆ ಇಟ್ಟಿದ್ದ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಧರಿವಾಲ್ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT