ಬುಧವಾರ, ಜೂನ್ 29, 2022
21 °C

ರೈಲ್ವೆಗೆ ₹25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆಗೆ ಸಂಪುಟ ಅನುಮೋದನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರೈಲ್ವೆಗೆ ₹25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡಲಿ ಎಂದು ಅವರು ಹೇಳಿದ್ದಾರೆ.

ರೈಲ್ವೆಗೆ ಸ್ಪೆಕ್ಟ್ರಂ ಹಂಚಿಕೆ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಓದಿ: 

ರೈಲ್ವೆಯು ಸದ್ಯ ಸಂವಹನಕ್ಕಾಗಿ ಆಪ್ಟಿಕಲ್ ಕೇಬಲ್ ನೆಟ್‌ವರ್ಕ್‌ ಅವಲಂಬಿಸಿದೆ. ಹೊಸ ಸ್ಪೆಕ್ಟ್ರಂ ಹಂಚಿಕೆಯಿಂದ ರಿಯಲ್‌ ಟೈಮ್‌ ಆಧಾರದಲ್ಲಿ ಹೈಸ್ಪೀಡ್‌ ರೇಡಿಯೊ ಬಳಸಲು ರೈಲ್ವೆಗೆ ಅನುಕೂಲವಾಗಲಿದೆ.

ರೈಲ್ವೆಯ ಸಂವಹನ ಮತ್ತು ಸಿಗ್ನಲಿಂಗ್ ಜಾಲಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದೂ ಸಚಿವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು