ಶನಿವಾರ, ಜುಲೈ 2, 2022
22 °C

ಕ್ಯಾ. ಅಭಿಲಾಷಾ ಬಾರಕ್‌ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ಯಾ. ಅಭಿಲಾಷಾ ಬಾರಕ್‌ ಅವರು ಭಾರತೀಯ ಸೇನೆಯ ಯುದ್ಧವಿಮಾನದ ಪ್ರಥಮ ಮಹಿಳಾ ಪೈಲಟ್‌ ಆಗಿ ಆಗಿದ್ದಾರೆ.

ನಾಸಿಕದ ಯುದ್ಧ ವಿಮಾನ ತರಬೇತಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಇತರ 36 ಸೇನಾ ಪೈಲಟ್‌ಗಳ ಜೊತೆ ಯುದ್ಧ ವಿಮಾನ ಪೈಲಟ್‌ ಆಗಿ ಪದವಿ ಪಡೆದರು.

ಕ್ಯಾ. ಅಭಿಲಾಶಾ ಅವರು ಮೂಲತಃ ಹರಿಯಾಣಾದವರು. ನಿವೃತ್ತ ಕರ್ನಲ್‌ ಓಮ್‌ ಸಿಂಗ್‌ ಅವರ ಮಗಳು. 2018ರ ಸೆಪ್ಟೆಂಬರ್‌ನಲ್ಲಿ ಅವರು ಸೇನಾ ವಾಯು ರಕ್ಷಣಾ ಕಾರ್ಪ್ಸ್‌ಗೆ  ಸೇರಿದರು. ಸೇನಾ ವಾಯು ರಕ್ಷಣಾ ಕಾರ್ಪ್ಸ್‌ಗೆ ಸೇರ್ಪಡೆಯಾಗುವ ಮೊದಲು ಅವರು ಸೇನೆಯ ಹಲವಾರು ತರಬೇತಿಗಳನ್ನು ಪಡೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು