ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಿಂಞ ಬಂದರು ವಿರೋಧಿ ಪ್ರತಿಭಟನೆ: ಚರ್ಚ್‌ ಪಾದ್ರಿಗಳ ವಿರುದ್ಧ ಮೊಕದ್ದಮೆ

Last Updated 27 ನವೆಂಬರ್ 2022, 16:23 IST
ಅಕ್ಷರ ಗಾತ್ರ

ತಿರುವನಂತಪುರ:ಕೇರಳದ ವಿಳಿಂಞದಲ್ಲಿ ಶನಿವಾರ ನಡೆದ ‘ಬಂದರು ವಿರೋಧಿ ಪ್ರತಿಭಟನೆ’ಗೆ ಸಂಬಂಧಿಸಿ ಇಲ್ಲಿಯ ಆರ್ಚ್‌ಬಿಷಪ್‌ ಥಾಮಸ್‌ ಜೆ. ನೆಟ್ಟೊ ಸೇರಿ ಸುಮಾರು 15 ಲ್ಯಾಟಿನ್‌ ಕ್ಯಾಥೋಲಿಕ್‌ ಪಾದ್ರಿಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಇವರು ಪ್ರತಿಭಟನೆಯನ್ನು ಬೆಂಬಲಿಸಿದ್ದರು. ಆರೋಪಿಗಳ ವಿರುದ್ಧ ಕ್ರಿಮಿನಲ್‌ ಸಂಚು, ಕಾನೂನುಬಾಹಿರವಾಗಿ ಗುಂಪುಸೇರುವಿಕೆ ಮತ್ತು ಗಲಭೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲದೇ ಇತರ ಸುಮಾರು 110 ಮಂದಿ ಪ್ರತಿಭಟನಾಕಾರರ ವಿರುದ್ಧವೂ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.ಕೇರಳ ಹೈಕೋರ್ಟ್‌ ಆದೇಶದ ನಡುವೆಯೂ ನಿರ್ಮಾಣ ಹಂತದಲ್ಲಿರುವವಿಳಿಂಞಬಂದರಿನ ಬಳಿ ಶನಿವಾರ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ನಿರ್ಮಾಣ ಕಾಮಗಾರಿಗೆ ಬಳಸುವ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ಗಳನ್ನು ತಡೆದು ಗಲಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT